ದಯಾ ವಿಶೇಷ ಶಾಲೆಯಲ್ಲಿ 78 ನೇ ಸ್ವಾತಂತ್ರ‍್ಯ ದಿನಾಚರಣೆ: ವಿವಿಧ ಉಡುಗೆಗಳಲ್ಲಿ ಮಿಂಚಿದ ಮಕ್ಕಳು: ಶಾಲಾ ಸಿಬ್ಬಂದಿಗಳನ್ನು ಪ್ರಶಂಸಿಸಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ (ರಿ) ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆ.15ರಂದು ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ನ ಸ್ಥಾಪಕ, ಹೈಕೋರ್ಟನ ವಕೀಲರಾದ ರಕ್ಷಿತ್ ಶಿವರಾಂರವರು ‘ಸ್ವಾತಂತ್ರ‍್ಯ ಎಂದರೆ ಸಮಾಜದ ಎಲ್ಲಾ ವರ್ಗದ ಜನರು ಯಾವುದೇ ಧರ್ಮ, ಜಾತಿ, ಭೇದವಿಲ್ಲಧೆ ಸಮಾನತೆಯಿಂದ ಇರುವುದು. ಭಿಕ್ಷಾಟನೆ ಎಂಬಂತಹ ಕತ್ತಲೆಯಿಂದ ಹೊರಬಂದು ಬಡತನದಿಂದ ಮುಕ್ತಿ ಹೊಂದಿ ನಿರುದ್ಯೋಗ ಸಮಸ್ಯೆಯಿಂದ ಸ್ವಾತಂತ್ರ‍್ಯವಾಗಬೇಕು ಎಂದರು. ಮಹತ್ಮಗಾಂಧಿ ಮತ್ತು ಅಂಬೇಡ್ಕರ್ ಮೊದಲಾದ ನಾಯಕರನ್ನು ಸ್ಮರಿಸಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಿ, ಸರ್ವರಿಗೂ ಸ್ವಾತಂತ್ರ‍್ಯದ ದಿನಾಚರಣೆಯ ಶುಭಾಶಯ ಕೊರಿ ವಿಶೇಷ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ಪ್ರಶಂಸಿಸಿದರು.

ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರು ಅದ ವಂ. ಫಾದರ್ ವಿನೋದ್ ಮಸ್ಕರೇನ್ಹಸ್ ರವರು ಮತನಾಡಿ, ಭಾರತ ದೇಶದಲ್ಲಿ ವಿವಿಧ ಭಾಷೆ, ಆಹಾರ, ಉಡುಪು, ಸಂಸ್ಕೃತಿ ಬೇರೆ-ಬೇರೆ ಇದ್ದರು ನಾವೆಲ್ಲಾರೂ ಭಾರತಾಂಬೆಯ ಮಕ್ಕಳು, ನಾವೆಲ್ಲಾರೂ ಭಾರತೀಯರು, ನಾವು ಹೇಗೆ ನೆಡೆದುಕೊಳ್ಳಬೇಕು ಎಂಬುದು ಸಂವಿಧಾನದಲ್ಲಿ ಅಡಕವಾಗಿದೆ, ಇಂತಹ ಸಂವಿಧಾನವಿತ್ತ ಅಂಬೇಡ್ಕರ್‌ರವರನ್ನು ಸ್ಮರಿಸಿ ಹಾಗೂ ಇತರ ರಾಷ್ಟ್ರೀಯ ನಾಯಕರ ಆದರ್ಶಗಳನ್ನು ನೆನೆಪಿಸಿದರು. ಜೊತೆಗೆ ಇತರ ದೇಶದೊಂದಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ವಿವಿಧ ಭಾಷೆ ಜನಾಂಗ ಸಂಪ್ರದಾಯ ಪದ್ದತಿಗಳಿದ್ದು, ಇಂತಹ ದೇಶದಲ್ಲಿ ನಾವು ಹುಟ್ಟುರುವುದು ನಮ್ಮ ಹೆಮ್ಮ. ಇತ್ತಿಚೆಗೆ ನೆಡೆದ ಒಲಂಫಿಕ್ಸ್ ನಲ್ಲಿ ವಿನೇಶ್ ಫೋಗಟ್ ರವರಿಗೆ ಚಿನ್ನದ ಪದಕ ದೊರಕದಿದ್ದರು ಜನರ ಮನಸ್ಸಿನಲ್ಲಿ ಚಿನ್ನಂತಹ ವ್ಯಕ್ತಿಯಾಗಿದ್ದಾರೆ ಎಂದು ಅವರನ್ನು ಸ್ಮರಿಸಿಕೊಳ್ಳುವ ಮೂಲಕ ಎಲ್ಲಾರಿಗೂ 78ನೇ ವರ್ಷದ ಸ್ವಾತಂತ್ರ‍್ಯ ದಿನದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರು ಹಾಗೂ ಎನ್ ಐ ಸಿ ಡೆವಲಪ್ಮೆಂಟ್ ಅಧಿಕಾರಿಯಾದ ಹರಿದಾಸ್, ಮೆಲಂತುಬೆಟ್ಟದ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಅಭಿವೃಧ್ಧಿ ಅಧಿಕಾರಿ ಜೆಸಿಂತ ಮೋನಿಸ್, ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚನ ಭದ್ತತಾ ಸಿಬ್ಬಂದಿಯಾದ ಗೋಡ್ಫ್ರೆ ರೋನಾಲ್ಡ್ ಮೋನಿಸ್, ಹಿರಿಯ ವಕೀಲರು ಹಾಗೂ ಸಮಾಜ ಸೇವಕರಾದ ಶಿವಕುಮಾರ್, ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕರು ಹಾಗೂ ವಕೀಲರಾದ ಸುಕನ್ಯ, ಎನ್ ಐ ಸಿ ಡೆವಲಪ್ಮೆಂಟ್ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ ಅರ್ವಿನ್ ಡಿಸೋಜಾ, ಪೋಷಕರ ಪ್ರತಿನಿಧಿಯಾಗಿ ಶುಭಕರ್, ಮಕ್ಕಳ ಪ್ರತಿನಿಧಿಯಾಗಿ ಹರ್ಬಾಝ್, ಮತ್ತು ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಉಡುಗೆಗಳಲ್ಲಿ ಮಕ್ಕಳು ಮಿಂಚಿದ್ದು, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮಕ್ಕಳಿಗೆ ವಿಶೇಷ ಭೋಜನಾ ವ್ಯವಸ್ಥೆ ಮಾಡಲಾಗಿತ್ತು.

ಶಿಕ್ಷಕಿ ಐಶ್ವರ್ಯ ನಿರೂಪಿಸಿ, ಶಿಕ್ಷಕಿ ಸುರಕ್ಷಾರವರು ಸ್ವಾಗತಿಸಿ, ಶಿಕ್ಷಕಿ ರಶ್ಮಿರವರು ವಂದಿಸಿದರು.

error: Content is protected !!