ಭ್ರಷ್ಟಾಚಾರ ಮಾಡಿಲ್ಲ,ದುಡ್ಡು ಮುಟ್ಟಿಲ್ಲ, ಆರೋಪಿತರಿಗೆ ಶಿಕ್ಷೆಯಾಗಲಿ: ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ:

 

 

 

 

ಬೆಳ್ತಂಗಡಿ: ಒಂದು ರೂಪಾಯಿ ಮುಟ್ಟಿಲ್ಲ ಭ್ರಷ್ಟಾಚಾರ ಮಾಡಿಲ್ಲ ಒಂದು ವೇಳೆ ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ, ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಗಸ್ಟ್ 14 ಬುಧವಾರ ಬೆಳಿಗ್ಗೆ ಮಹಮ್ಮಾಯಿ ದೇವಸ್ಥಾನದಲ್ಲಿ  ಪ್ರಮಾಣ ಮಾಡಿದ್ದಾರೆ.  ವಿವಿಧ ರೀತಿಯ ಭ್ರಷ್ಟಾಚಾರಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾಡಿದ್ದಾರೆ. ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಳೆದ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯ ಮೂಲಕ ಆರೋಪಿಸಿದ್ದರು. ಈ ಬಗ್ಗೆ ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರಲ್ಲದೇ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಮಾರಿಗುಡಿಯಲ್ಲಿ ಇಂದು  ಪ್ತಮಾಣ ಮಾಡುವುದಾಗಿ ತಿಳಿಸಿದ್ದರು.  ಇವತ್ತು ಬೆಳಿಗ್ಗೆ ಮಾರಿಗುಡಿಯಲ್ಲಿ   ಭ್ರಷ್ಟಾಚಾರ ನಡೆಸಿಲ್ಲ  ಡಿಪಿ ಜೈನ್ ಕಂಪನಿಯಿಂದ 3ಕೋಟಿ ಕಿಕ್ ಬ್ಯಾಕ್ ಪಡೆದಿಲ್ಲ ಒಂದು ರೂಪಾಯಿ ಹಣ ಯಾರಿಂದಲೂ ಪಡೆದಿಲ್ಲ , ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ಬೆಳ್ತಂಗಡಿಯ ಮಾರಿಗುಡಿಯ ಮಹಾದೇವಿ ನೀಡಲಿ. ಒಂದು ವೇಳೆ ಅವರು ಆರೋಪಿಸಿದಂತೆ ನಾನು ತಪ್ಪು ಮಾಡಿದ್ದರೆ ನನ್ನನ್ನೂ ಶಿಕ್ಷಿಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಪಟ್ಟಣ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಲಾಯಿಲ ಗ್ರಾ.ಪಂ. ಸದಸ್ಯ ಗಣೇಶ್ ಆರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಗೌಡ ನಾವೂರು, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ಸುಪ್ರಿತ್ ಜೈನ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮೇಲಂತಬೆಟ್ಟು ಗ್ರಾ.ಪಂ ಸದಸ್ಯರುಗಳಾದ   ಪ್ರಭಾಕರ ಸವಣಾಲ್, ಚಂದ್ರರಾಜ್ ನೂಜೇಲು,  ರಂಜಿತ್ ಶೆಟ್ಟಿ ಮದ್ದಡ್ಕ, ಪ್ರಕಾಶ್ ಆಚಾರ್ಯ ಸೇರಿದಂತೆ ಇನ್ನಿತರರು, ಉಪಸ್ಥಿತರಿದ್ದರು.

 

error: Content is protected !!