ಬೆಳ್ತಂಗಡಿ:ಶಾಸಕ ಹರೀಶ್ ಪೂಂಜ ಐಬಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಡಿ.ಪಿ. ಜೈನ್ ಅವರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಹಾಗೂ ಹಲವಾರೂ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ಆರೋಪದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ರಕ್ಷಿತ್ ಶಿವರಾಂ ಮಾಡಿರುವ ಆರೋಪ ಸುಳ್ಳು ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಿಲ್ಲ ಎಂದು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಮಹಮ್ಮಾಯಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದರು. .ನಂತರ ಮಾಧ್ಯಮದವರ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿ, ಮಲ್ಲೆಶ್ವರಂನಿಂದ ಬಂದ ಒಬ್ಬ ವ್ಯಕ್ತಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ತಾಲೂಕಿನ ಘನತೆಯನ್ನು ಕುಂದಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತಿದ್ದಾರೆ.ಅದರ ಜೊತೆಜೊತೆಗೆ ಅನೇಕ ಸುಳ್ಳು ಆರೋಪಗಳನ್ನು ಸಮಾಜದ, ಮಾಧ್ಯಮದ ಎದುರು ಕಳೆದ ಕೆಲವು ಸಮಯಗಳಿಂದ ಮಾಡುತ್ತಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಡಿರುವ ಆರೋಪ ಸುಳ್ಳು ಈ ಬಗ್ಗೆ ಮಾರಿಗುಡಿಯ ತಾಯಿಯ ಎದುರು ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದೆ ಅದರಂತೆ ತಾಲೂಕಿನ ಎಲ್ಲ ಹಿಂದೂಗಳ ಶ್ರದ್ಧಾ ಕೇಂದ್ರವಾದ ಮಾರಿಗುಡಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದೇನೆ.ಇವತ್ತು ನೀವು ಮಾಡಿರುವ ಆರೋಪಗಳು ಅಪಾದನೆಗಳು ನಿಜ ಎಂದಾದರೆ ನೀವೂ ಬನ್ನಿ ಎಂದು ಕರೆದಿದ್ದೆ ಅದರೆ ಅವರು ಬಂದಿಲ್ಲ. ಅದ್ದರಿಂದ ಈ ರೀತಿಯ ಸುಳ್ಳು ಆಪಾದನೆ ಆರೋಪ ಇವತ್ತಿಗೆ ಕೊನೆಯಾಗಬೇಕು ಅದೇ ರೀತಿ ಇಂತಹ ದುಷ್ಟ ಶಕ್ತಿಗಳು ತಾಲೂಕಿನಿಂದ ಓಡಬೇಕು,ಅದೇ ರೀತಿ ಇಂತಹ ದುಷ್ಟ ಶಕ್ತಿಗಳಿಂದ ತಾಲೂಕನ್ನು ಕಾಪಾಡಬೇಕು ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದೇನೆ ಎಂದು ಹೇಳಿದರು.