ಬಸ್ ನಿಲ್ಲಿಸದ ಚಾಲಕ: ಬಸ್ ಮೇಲೆ ಬಿಯರ್ ಬಾಟಲ್ ಎಸೆತ: ಹಿಡಿಯಲು ಬಂದ ಕಂಡಕ್ಟರ್ ಮೈಮೇಲೆ ಹಾವು ಬಿಟ್ಟ ಮಹಿಳೆ!; ಬ್ಯಾಗ್‌ನಲ್ಲಿ ಹಾವು ಹೊತ್ತೊಯ್ದಿದ್ದು ಯಾಕೆ..? ಮುಂದೇನಾಯಿತು..?

 

ಹೈದರಾಬಾದ್: ಪ್ರಯಾಣಿಕರನ್ನು ನೋಡಿದರೂ ಬಸ್ ನಿಲ್ಲಿಸಿದ ಬಸ್ ಮೇಲೆ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಈ ಮೊದಲು ಕೂಡ ನಡೆದಿದೆ. ತೆಲಂಗಾಣದಲ್ಲಿ ಇಂತದ್ದೇ ಘಟನೆ ನಡೆದಿದ್ದು ಕಲ್ಲಿನ ಬದಲು ಬಸ್ ಮೇಲೆ ಬಿಯರ್ ಬಾಟಲ್ ಎಸೆಯಲಾಗಿದೆ. ಅಲ್ಲದೆ ಅದೇ ಬಸ್ ಕಂಡಕ್ಟರ್ ಮೈಮೇಲೆ ಹಾವು ಬಿಟ್ಟ ಘಟನೆಯೂ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿದ್ಯಾನಗರ ಬಸ್ ನಿಲ್ದಾಣದಲ್ಲಿ ತಿರುವು ಪಡೆದುಕೊಂಡು ಮುಂದೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ಚಾಲಕನಿಗೆ ಕೈ ಸನ್ನೆ ಮೂಲಕ ಮನವಿ ಮಾಡಿದ್ದಾರೆ. ಆತ ಬಸ್ ನಿಲ್ಲಿಸದಿದ್ದಾಗ ಮಹಿಳೆ ಕೋಪಗೊಂಡು ಬಿಯರ್ ಬಾಟಲಿ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಬಸ್‌ನ ಗ್ಲಾಸ್ ಒಡೆದುಹೋಗಿದ್ದರಿಂದ ಚಾಲಕ ಬಸ್ ನಿಲ್ಲಿಸಿದ್ದು ತಕ್ಷಣ ಬಸ್‌ನಲ್ಲಿದ್ದ ಮಹಿಳಾ ಕಂಡಕ್ಟರ್ ಕೆಳಗಿಳಿದು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ದಾಳಿ ಮಾಡಿದ ಆಕೆಯನ್ನು ಹಿಡಿಯಲು ಮುಂದಾದಾಗ ಆ ಮಹಿಳೆ ಏಕಾಏಕಿ ತನ್ನ ಬ್ಯಾಗ್‌ನಿಂದ ಹಾವನ್ನು ಹೊರತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದಾಳೆ. ಹಾವು ನೆಲಕ್ಕೆ ಬಿದ್ದು ರಸ್ತೆಬದಿಯಲ್ಲಿ ಕಣ್ಮರೆ ಆಗಿದೆ. ಈ ಘಟನೆಗಳನ್ನು ನೋಡುತ್ತಿದ್ದ ಪ್ರಯಾಣಿಕರು ಹಾವನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ.

ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಚೀಲದಲ್ಲಿ ಹಾವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

error: Content is protected !!