ಬೆಳ್ತಂಗಡಿ: ಹೊಂಡಮಯ ರಸ್ತೆಯಲ್ಲಿ ಟ್ರಕ್ ಜಾಮ್ ಆಗಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ಆ.08ರಂದು ಕಾಶಿಬೆಟ್ಟುವಿನಲ್ಲಿ ಸಂಭವಿದೆ.
ಮಧ್ಯಾಹ್ನ ಸುಮಾರು 1:50ರ ವೇಳೆಗೆ ಬೆಳ್ತಂಗಡಿಯಿಂದ ಉಜಿರೆಗೆ ಬರುತ್ತಿದ್ದ ಟ್ರಕ್ ರಸ್ತೆಯಲ್ಲೆ ಜಾಮ್ ಆಗಿದ್ದು ಆ ಬಳಿಕ ಎರಡೂ ಕಡೆ ಸಾಗುವ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆ.
ಉಜಿರೆ ಹಾಗೂ ಬೆಳ್ತಂಗಡಿ ಕಡೆ ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಈ ಮಧ್ಯೆ ಬಂದ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಪರದಾಡಿದೆ.
ಉಜಿರೆಯಿಂದ ಬಂದ ಖಾಸಗಿ ಬಸ್ಸೊಂದು ಕಾಶಿಬೆಟ್ಟು ಬಸ್ ಸ್ಟಾಪ್ ನಲ್ಲಿದ್ದ ಸ್ವಲ್ಪ ಜಾಗದಲ್ಲೆ ತಿರುವು ಪಡೆದುಕೊಂಡು ವಾಪಾಸ್ಸಾಗಿದೆ.
ಕಾಶಿಬೆಟ್ಟುವಿನಲ್ಲಿ ರಸ್ತೆ ತೀರ ಕೆಟ್ಟು ಹೋಗಿದ್ದು ಭಾರೀ ಹೊಂಡ ನಿರ್ಮಾಣವಾಗಿದೆ. ಈ ರಸ್ತೆ ಸಂಚಾರವೇ ಬೇಡ ಎಂದರೂ ಪ್ರಯಾಣಿಕರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿ ಸಾಗಬೇಕಿದೆ. ಇದೊಂದು ಪರಿಹಾರವೇ ಕಾಣದ ಸಮಸ್ಯೆಯಾಗಿ ಪರಿಣಮಿಸಿದೆ.