ಯಶ್ ಅಭಿನಯದ ‘ಟಾಕ್ಸಿಕ್’ ಶೂಟಿಂಗ್ ಆರಂಭ, ಬೆಂಗಳೂರಿನ HMT ಕಾರ್ಖಾನೆಯಲ್ಲಿ ಅದ್ಧೂರಿ ಸೆಟ್:ಮುಹೂರ್ತ ನೆರವೇರಿಸಿ ಅಭಿಮಾನಿಗಳಿಗೆ ಸಿಹಿ‌ಸುದ್ದಿ ನೀಡಿದ ರಾಕಿಂಗ್ ಸ್ಟಾರ್, ಸೆಟ್ ಬಾಯ್ ಕೈಯಿಂದಲೇ ಕ್ಲಾಪ್ ಮಾಡಿಸಿ ತಂತ್ರಜ್ಞರಿಗೆ ಗೌರವ ಸಮರ್ಪಣೆ:ಕೆ.ವಿ.ಎನ್. ವೆಂಕಟ್ ನಿರ್ಮಾಣದ ಶತಕೋಟಿ ವೆಚ್ಚದ ಸಿನಿಮಾ, ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್

 

ಬೆಂಗಳೂರು: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಲಕ್ಕಿ ನಂಬರ್ ಡೇಟ್‌ನಿಂದ ಸಿನಿಮಾ ಶೂಟಿಂಗ್ ಆರಂಭಿಸಿದ ಯಶ್ ಬಹುಕೋಟಿ ವೆಚ್ಚದ ಚಿತ್ರಕ್ಕೆ ಸೆಟ್ ಬಾಯ್ ಸುನೀಲ್ ಅವರು ಕ್ಲಾಪ್ ಮಾಡಿ ಆರಂಭ ನೀಡಿದ್ದು, ಚಲನಚಿತ್ರ ತಂತ್ರಜ್ಞರಿಗೆ ತಂಡ ವಿಶೇಷ ಗೌರವ ನೀಡಿದೆ.

ಆ.08 ಚಿತ್ರೀಕರಣಕ್ಕೆ ದಿನಾಂಕ ನಿಗದಿ ಮಾಡಿದ್ದು, ದೇವರಿಗೆ ಪೂಜೆ ಸಲ್ಲಿಸಿ, ಬಹಳ ಸರಳತೆಯಿಂದ ಸೆಟ್ ಬಾಯ್ ಕೈಯಲ್ಲೇ ಕ್ಲಾಪ್ ಮಾಡಿಸಿ ಆರಂಭ ನೀಡಲಾಗಿದೆ.

ಕೆ.ವಿ.ಎನ್. ವೆಂಕಟ್ ನಿರ್ಮಾಣದ ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನವಿರಲಿದ್ದು ಬೆಂಗಳೂರಿನ HMT ಕಾರ್ಖಾನೆಯಲ್ಲಿ ಅದ್ಧೂರಿ ಸೆಟ್ ಸಿದ್ಧವಾಗಿದೆ.

ಯಶ್ ಸಿನಿಮಾ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲಕ್ಕೆ ರಾಕಿಂಗ್ ಸ್ಟಾರ್ ತೆರೆ ಎಳೆದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

error: Content is protected !!