ಅನಾರೋಗ್ಯ ಪೀಡಿತ ವೃದ್ಧೆಯನ್ನು ಕಚ್ಚಿ ಕೊಂದ ಬೀದಿನಾಯಿಗಳು, ಬೇರ್ಪಟ್ಟಿತ್ತು ತಲೆ, ಹೊಟ್ಟೆ ಭಾಗ:ತೆಲಂಗಾಣದಲ್ಲಿ ನಡೆಯಿತು ‌ಭೀಕರ‌ ಘಟನೆ, ದೇಹದ ಭಾಗಗಳನ್ನು ಛಿದ್ರ, ಛಿದ್ರಗೊಳಿಸಿದ ಶ್ವಾನಗಳು

ಸಾಂದರ್ಭಿಕ ಚಿತ್ರ

ತೆಲಂಗಾಣ: ಗುಡಿಸಲೊಳಗೆ ಅನಾರೋಗ್ಯದಿಂದ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ಕಚ್ಚಿ ಕೊಂದಿರುವ ಘಟನೆ ಸಿರ್ಸಿಲ್ಲಾದಲ್ಲಿ ನಡೆದಿದೆ.

82 ವರ್ಷದ ಪಿಟ್ಲಾ ರಾಜಲಕ್ಷ್ಮಿಯವರ ಪುತ್ರರು ಇವರನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಆರೈಕೆ ಮಾಡುತ್ತಿದ್ದರು. ಬಾಗಿಲು ಹಾಕಿಕೊಳ್ಳದೆ ಗುಡಿಸಲಿನಲ್ಲಿ ಮಲಗಿದ್ದಾಗ, ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿದೆ. ವೃದ್ಧೆಯನ್ನು ಕಚ್ಚಿ ಕೊಂದಿದ್ದು ದೇಹವನ್ನು ತಿಂದು ಬಳಿಕ ರಸ್ತೆಯ ಮೇಲೆ ವಾಂತಿ ಮಾಡಿವೆ. ಇದನ್ನು ಕಂಡ ಸ್ಥಳೀಯರು ಕುಟುಂಬದವರನ್ನು ಎಚ್ಚರಿಸಿದ್ದಾರೆ.

ವೃದ್ಧೆಯ ತಲೆ ಮತ್ತು ಹೊಟ್ಟೆಯ ಒಂದು ಭಾಗ ಕಾಣೆಯಾಗಿದ್ದವು. ಬಳಿಕ ಸ್ವಲ್ಪ ದೂರದಲ್ಲಿ ದೇಹದ ಇತರೆ ಭಾಗಗಳು ಪತ್ತೆಯಾಗಿದೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಬೀದಿ ನಾಯಿಯನ್ನು ಕೊಂದು ಹಾಕಿದ್ದಾರೆ.

ಸದ್ಯ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

error: Content is protected !!