ಸಾಂದರ್ಭಿಕ ಚಿತ್ರ
ನವದೆಹಲಿ : ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಕೇರಳ ಸೇರಿದಂತೆ ಕರ್ನಾಟಕ, ಉತ್ತರಾಖಂಡ್‌ನಲ್ಲೂ ಮಳೆಯಾರ್ಭಟ ಹೆಚ್ಚಾಗಿದೆ. ಮಳೆ ಯಾವಾಗ ಕಡಿಮೆಯಾಗುತ್ತದೆ ಎಂದು ಜನ ಕಾಯುತ್ತಿರುವಾಗಲೆ 2 ತಿಂಗಳು ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಭಾರೀ ಮಳೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದಿರುವ ಹವಾಮಾನ ಇಲಾಖೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಳೆಯಾಗಿ ಅಲ್ಲಲ್ಲಿ ಅವಘಡಗಳೂ ಸಂಭವಿಸುವ ಸಾಧ್ಯತೆ ಇದೆ ಎಂದಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಮಳೆಯು ದೀರ್ಘಾವಧಿಯ ಸರಾಸರಿಯ 106 ಶೇಕಡಾ, ಇದು 422.8 ಮಿಮೀ ಎಂದು IMD ಹೇಳುತ್ತದೆ. ಜೂನ್ 1 ರಿಂದ ದೇಶದಲ್ಲಿ 453.8 ಮಿಮೀ ಮಳೆಯಾಗಿದೆ, ಆದರೆ ಸಾಮಾನ್ಯ ಮಳೆ 445.8 ಮಿಮೀ ಆಗಿದೆ. ಇದು ವಾಡಿಕೆಗಿಂತ ಶೇ.2ರಷ್ಟು ಹೆಚ್ಚು ಮಳೆಯಾಗಿದೆ. ಏಕೆಂದರೆ, ಜೂನ್‌ನಲ್ಲಿ ಒಣಗಿದ್ದ ನಂತರ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.