ಬೆಳ್ತಂಗಡಿ, ರಾತ್ರಿಯಿಂದ ಸುರಿಯುತ್ತಿದೆ ಭಾರೀ ಮಳೆ: ಏರಿಕೆಯಾಗುತ್ತಿರುವ ನದಿಗಳ ನೀರಿನ ಮಟ್ಟ: ಚಾರ್ಮಾಡಿ ಘಾಟ್ ಮರ ಬಿದ್ದು ರಸ್ತೆ ಬ್ಲಾಕ್, ಸಂಚಾರಕ್ಕೆ ಅಡಚಣೆ’

 

 

ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆ ಸಂಜೆಯಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಮಲವಂತಿಗೆ ದಿಡುಪೆ ,ಕಿಲ್ಲೂರು, ಭಾಗಗಳಲ್ಲಿ ರಾತ್ರಿ ಭಾರೀ ಮಳೆ ಸುರಿದಿದ್ದು ಸೋಮವತಿ , ಮೃತ್ಯುಂಜಯ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸುತ್ತಮುತ್ತ  ತಗ್ಗು ಪ್ರದೇಶಗಳಿಗೆ ನೀರು  ನುಗ್ಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜನರ ಆತಂಕಕ್ಕೆ ಕಾರಣವಾಗಿತ್ತು. ಇವತ್ತು ಕೂಡ ಮಳೆ ಹೆಚ್ಚಾಗಿದ್ದು ನದಿ, ತೊರೆಗಳಲ್ಲಿ ನೀರು ಹೆಚ್ಚಾಗುವ ಸಂಭವ ಇದೆ.ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಬ್ಲಾಕ್ ಆಗಿದ್ದು , ಮರ ತೆರವು ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!