ಬೆಂಗಳೂರು – ಮಂಗಳೂರು ರೈಲು ಸಂಚಾರ ಸ್ಥಗಿತ: ಖಾಸಗಿ ಬಸ್, ವಿಮಾನ ಟಿಕೆಟ್ ದರ ಹೆಚ್ಚಳ

ದ.ಕ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ಹೆಚ್ಚಾಗಿದ್ದು ಪ್ರಯಾಣಿಕರಿಗೆ ತಲೆನೋವಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲು ಹಳಿ ಇರುವ ಜಾಗದಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. 14 ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ರೈಲು ಪ್ರಯಾಣಿಕರೆಲ್ಲರೂ ಅನಿವಾರ್ಯವಾಗಿ ತಮ್ಮ ಪ್ರಯಾಣಕ್ಕೆ ಬಸ್ ಹಾಗೂ ವಿಮಾನವನ್ನು ಆಯ್ಕೆಮಾಡಿಕೊಂಡಿದ್ದಾರೆ. ಈ ಹಿನ್ನಲೆ ಟಿಕೆಟ್ ದರ ಹೆಚ್ಚಳವಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಾಗಿದ್ದು ಉಭಯ ನಗರಗಳ ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ. ಎಸಿ ಬಸ್ ಟಿಕೆಟ್ ದರ 2000 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಡೆ ಹೊರಟ ಜನರಿಗೆ ತೊಂದರೆಯಾಗಿದೆ.

ಬೆಂಗಳೂರು ಮಂಗಳೂರು ವಿಮಾನ ಟಿಕೆಟ್ ಕೂಡ ದುಬಾರಿಯಾಗಿದ್ದು ಉಭಯ ನಗರಗಳ ನಡುವಣ ವಿಮಾನ ಪ್ರಯಾಣ ದರ 3 ರಿಂದ 4 ಸಾವಿರ ರೂ. ಇದ್ದಿದ್ದು ಈಗ ಏಕಾಏಕಿ 10,000 ರೂ.ಗೆ ಏರಿಕೆಯಾಗಿದೆ. ಇಂದಿನ ಕೆಲ ವಿಮಾನಗಳಲ್ಲಿ 7,500 ರಿಂದ 16 ಸಾವಿರ ರೂ. ಟಿಕೆಟ್ ದರ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!