ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಹಿನ್ನಲೆ ಲಾಯಿಲ ಗ್ರಾಮದ ಪುತ್ರಬೈಲು ಬಳಿಯ ಸೋಮವತಿ ನದಿ, ಕಿಂಡಿ ಅಣೆಕಟ್ಟಿನಲ್ಲಿ ಮರ ಹಾಗೂ ಕಸಗಳನ್ನು ಸಿಕ್ಕಿಹಾಕಿಕೊಂಡಿದ್ದು ಜು.20ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಮೂಲಕ ತೆರವುಗೊಳಿಸಲಾಯಿತು.
ಮಳೆ ನೀರಿನಲ್ಲಿ ತೇಲಿಬಂದ ಕಸ ಕಡ್ಡಿಗಳು, ಮರದ ತುಂಡುಗಳು ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡು ನೀರು ಹರಿದು ಹೋಗಲು ಸಮಸ್ಯೆಯಾಗಿ ಕೃತಕ ನೆರೆ ಉಂಟಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಇದನ್ನು ಮನಗಂಡ ಲಾಯಿಲ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ತಂಡದವರ ಮೂಲಕ ಹಾಗೂ ಸ್ಥಳೀಯರ ಸಹಕಾರದಲ್ಲಿ ತೆರವುಗೊಳಿಸಲಾಯಿತು.
ಇಂದು ಮಳೆ ಕಡಿಮೆಯಾದ ಹಿನ್ನೆಲೆ ತೆರವು ಕಾರ್ಯ ನಡೆಸಲಾಯಿತು.