ಶಿರೂರು ಗುಡ್ಡ ಕುಸಿತ: ರಸ್ತೆಯ ಮಣ್ಣು ತೆರವು ಕಾರ್ಯಾಚರಣೆ ಮುಕ್ತಾಯ: ಗ್ಯಾಸ್ ಟ್ಯಾಂಕರ್‌ನ ಗ್ಯಾಸ್ ಖಾಲಿ : ವಾಸಯೋಗ್ಯಕ್ಕೆ ಮರಳಿದ ಊರು: ಸಂಚಾರಕ್ಕಿಲ್ಲ ಅನುಮತಿ..!


ಕಾರವಾರ: ಅಂಕೋಲ, ಶಿರೂರು ಸಮೀಪ ಗುಡ್ಡ ಕುಸಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿತ್ತಲ್ಲದೆ, ನದಿ ನೀರಿನಲ್ಲಿ ಕೆಲವರು ಕೊಚ್ಚಿ ಹೋಗಿದ್ದು, ನದಿಯಲ್ಲಿ ತೇಲಿದ ಗ್ಯಾಸ್ ಟ್ಯಾಂಕರ್ ಇವೆಲ್ಲವೂ ಭಾರೀ ಆತಂಕ ಸೃಷ್ಠಿಸಿತ್ತು. ಘಟನೆಯ ಬಳಿಕ ಇಲ್ಲಿ ನಡೆದ ಅವಿರತ ಕಾರ್ಯಾಚರಣೆ ಪೂರ್ಣಗೊಂಡಿದ್ದು ಅಧಿಕಾರಿಗಳು ಈ ಊರನ್ನು ಮತ್ತೆ ವಾಸಯೋಗ್ಯದತ್ತ ಮರಳಿಸಿದ್ದಾರೆ.


ಹೆದ್ದಾರಿಯ ಒಂದು ಬದಿಯ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಗಂಗಾವಳಿ ನದಿಯಲ್ಲಿದ್ದ, ಗ್ಯಾಸ್ ಟ್ಯಾಂಕರ್‌ನಲ್ಲಿನದ್ದ ಸುಮಾರು 15 ಟನ್ ಗ್ಯಾಸ್‌ನ್ನು ಹೆಚ್.ಪಿ.ಸಿ.ಎಲ್, ಬಿ.ಪಿ.ಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಹೀಗಾಗಿ ಈಗ ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ತಿಳಿಸಲಾಗಿದೆ. ಆದರೆ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷಿಪ್ರಿಯ ತಿಳಿಸಿದ್ದಾರೆ.

ಈ ಘಟನೆ ಸಂಭವಿಸಿದ ಬಳಿಕ ಕಾರವಾರ ತಾಲೂಕಿನ 6, ಅಂಕೋಲದ 6, ಕುಮಟಾದ 5, ಹೊನ್ನಾವರದ 13 ಸೇರಿದಂತೆ ಒಟ್ಟು 30 ಕಾಳಜಿ ಕೇಂದ್ರಗಳಲ್ಲಿ 2373 ಮಂದಿ ಆಶ್ರಯ ಒದಗಿಸಲಾಗಿದ್ದು. ಅಲ್ಲಿ ಇವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗಿತ್ತು.

error: Content is protected !!