ಬೆಳ್ತಂಗಡಿ: ತಾಲೂಕಿನಲ್ಲಿ ನಿರಂತರ ಭಾರೀ ಮಳೆಯಾಗುತಿದ್ದು ಅಲ್ಲಲ್ಲಿ ಗುಡ್ಡ ಕುಸಿತ, ಮರ ಉರುಳಿ ಬೀಳುವುದು, ಮನೆಗಳಿಗೆ ಹಾನಿಗಳಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯ ಕಟ್ಟೆ ಬಳಿ ಪ್ರಯಾಣಿಕರ ತಂಗುದಾಣವೊಂದು ಮಳೆಗೆ ಕುಸಿದು ಬಿದ್ದಿದೆ ಜನ ಸಂಚಾರ ಇಲ್ಲದ ಕಾರಣದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ದ.ಕ.ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ಎರಡು ದಿನಗಳಿಂದ ರಜೆ ಸಾರಲಾಗಿದೆ. ಮುಂದಿನ ಎರಡು ದಿನ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ.