ಬೆಂಗಳೂರು: ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು ಸಂತಾಪ ಸೂಚನ ನಿರ್ಣಯದ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇತ್ತೀಚೆಗೆ ನಿಧನರಾದ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ಕೆ. ವಸಂತ ಬಂಗೇರರಿಗೆ ಸಂತಾಪ ಸೂಚಿಸಿದ್ದಾರೆ.
ದಿ.ಕೆ ವಸಂತ ಬಂಗೇರರ ರಾಜಕೀಯ ಮತ್ತು ಸಾಮಾಜಿಕ ಜೀವನವನ್ನು ಮೆಲುಕು ಹಾಕಿದ ಅವರು ‘‘ದಕ್ಷಿಣ ಕನ್ನಡ ಜಿಲ್ಲೆಗೆ ಆದರ್ಶ ನಾಯಕತ್ವ ತೋರಿದ ಹಿರಿಯ ರಾಜಕಾರಣಿ ದಿ.ಕೆ ವಸಂತ ಬಂಗೇರ. ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯಲ್ಲಿ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ತುಳು ಭಾಷಾಭಿಮಾನದಿಂದ ‘ಸಂಗಮ ಸಾಕ್ಷಿ’ ಎಂಬ ತುಳು ಚಲನಚಿತ್ರದ ನಿರ್ಮಾಪಕರಾಗಿದ್ದರು” ಎಂದರು.
1983ರಿಂದ 3 ಪಕ್ಷದಿಂದ 5 ಬಾರಿ ಶಾಸಕರಾಗಿ, ತಾಲೂಕಿನಲ್ಲಿ ಮಂಗನ ಖಾಯಿಲೆ ನಿರ್ಮೂಲನೆಗೆ ಆಸ್ಪತ್ರೆ ನಿರ್ಮಿಸಿ, ಬಡ ಮಕ್ಕಳ ಶಿಕ್ಷಣಕ್ಕೆ ಕಾಲೇಜ್ ಸ್ಥಾಪಿಸಿ, ಆರ್ಥಿಕ ಕ್ಷೇತ್ರಕ್ಕೆ ಶಕ್ತಿ ನೀಡಲು, ಜೊತೆಗೆ ಉದ್ಯೋಗ ಸೃಷ್ಟಿಗೆ ಗುರದೇವ ಸಹಕಾರಿ ಸಂಘ ನಿರ್ಮಿಸಿ, ಇಡೀ ಜಿಲ್ಲೆಗೆ ಮಾದರಿ ನಾಯಕತ್ವ ನೀಡಿದವರು. ಅವರ ಪತ್ನಿ, ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಹಿತೈಷಿಗಳಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.