ಬೆಳ್ತಂಗಡಿ: ನಗರದ ಕಲ್ಲಗುಡ್ಡೆಯಲ್ಲಿರುವ ಟ್ರೀ ಪಾರ್ಕ್ ಹೋಗುವ ರಸ್ತೆಯ ಕಾಮಗಾರಿ ಕಳಪೆ ಗುಣಮಟ್ಟದಿಂದಾಗಿ ಮಳೆ ಪ್ರಾರಂಭದಲ್ಲೇ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ.
ಈ ರಸ್ತೆಯಲ್ಲಿ ಘನ ಸೇರಿದಂತೆ ವಾಹನ ಸಂಚಾರ ಅಪಾಯಕಾರಿಯಾಗಿತ್ತು. ಅದಲ್ಲದೇ ಅದೇ ರಸ್ತೆಯ ಬದಿಯಲ್ಲಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿತ್ತಲ್ಲದೇ ಅದರ ಅಡಿಯಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಸಾರ್ವಜನಿಕ ಅಪಾಯದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ಕ್ರತ ವರದಿಯನ್ನು ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದು, ಇದೀಗ ಅರಣ್ಯ ಇಲಾಖೆ ಹಾಗೂ ನಗರ ಪಂಚಾಯತ್ ಸ್ಪಂದಿಸಿ ಅಪಾಯಕಾರಿ ಮರ ಹಾಗೂ ಘನ ವಾಹನ ಸಂಚಾರ ನಿಷೇಧಿಸಿ ನಾಮಫಲಕವನ್ನು ಅಳವಡಿಸಿದೆ.
ಪ್ರಜಾಪ್ರಕಾಶ ನ್ಯೂಸ್ ವರದಿಯ ಬೆನ್ನಲ್ಲೇ ಸ್ಪಂದಿಸಿದ ಅಧಿಕಾರಿಗಳಿಗೆ ಹಾಗೂ ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದರಲ್ಲದೇ ಶೀಘ್ರದಲ್ಲೇ ಕುಸಿತಕ್ಕೊಳಗಾದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.