ಬೆಂಗಳೂರು: ನಟ ದರ್ಶನ್ ಮೇಲಿನ ಅಭಿಮಾನ ಪ್ರದರ್ಶಿಸಲು ಮುಂದಾದ ಪೋಷಕರು ಈಗ ಸಂಕಷ್ಟಕ್ಕೆ ಬಿದ್ದಿದ್ದಾರೆ.
ನಟ ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್ ಮಾಡಿಸಲಾಗಿದ್ದು ಈ ಬಗ್ಗೆ ಅಲರ್ಟ್ ಆಗಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೋಷಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಮಗುವಿನ ಫೋಟೋ ಶೂಟ್ ಸಂದರ್ಭದಲ್ಲಿ ಬಿಳಿ ಬಟ್ಟೆಯನ್ನು ಹಾಕಿಸಿದಲ್ಲದೆ ದರ್ಶನ್ ಖೈದಿ ನಂಬರ್ 6106 ಎಂದು ಬಟ್ಟೆ ಮೇಲೆ ಬರೆದು ಜೊತೆಗೆ ಜೈ ಡಿ ಬಾಸ್ ಎಂದು ಬರೆದಿದ್ದಾರೆ.
ಸದ್ಯ ಈ ವಿಚಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಿಳಿದಿದ್ದು ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್ ಇಲಾಖೆಯ ಮೂಲಕ ಪೋಷಕರ ಪತ್ತೆಗೆ ಮುಂದಾಗಿದೆ.