ಹರಿಯುವ ತೊರೆ ಬ್ಲಾಕ್, ಗದ್ದೆ, ತೋಟಗಳಿಗೆ ನುಗ್ಗಿದ ನೀರು: ಪ್ರಜಾಪ್ರಕಾಶ ನ್ಯೂಸ್ ವರದಿಗೆ ತಹಶೀಲ್ದಾರ್ ಸ್ಪಂದನೆ: ತಾ.ಪಂ ಇಓ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ: ವಾರದೊಳಗೆ ಮಣ್ಣು ತೆರವುಗೊಳಿಸುವಂತೆ ಸೂಚನೆ:

 

 

 

 

ಬೆಳ್ತಂಗಡಿ: ತೊರೆಯೊಂದನ್ನು ಮಣ್ಣು ಹಾಕಿ ಮುಚ್ಚಿದ ಪರಿಣಾಮ ಗದ್ದೆಯಲ್ಲಿ ನೀರು ನಿಂತು ಕೃಷಿ ಮಾಡದಂತಹ ಸ್ಥಿತಿ ಲಾಯಿಲ ಉಜಿರೆ ಗ್ರಾಮದ ವಿವೇಕಾನಂದ ನಗರ, ಕಕ್ಕೆಜಾಲ್,ಗಾಂಧಿನಗರದ ಕೃಷಿಕರಿಗೆ ನಿರ್ಮಾಣವಾಗಿತ್ತು. ಈ ಬಗ್ಗೆ ಜೂ 28 ರಂದು  ಪ್ರಜಾಪ್ರಕಾಶ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಬೆಳ್ತಂಗಡಿ ತಹಶೀಲ್ದಾರ್ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಜೂ 29 ರಂದು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ತೊರೆಗೆ ಹಾಕಿದ ಮಣ್ಣನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರಲ್ಲದೇ ಒಂದು ವೇಳೆ ತೆರವುಗೊಳಿಸದೇ ಹೋದರೆ ತನ್ನ ಗಮನಕ್ಕೆ ತರುವಂತೆ ಸ್ಥಳೀಯರಿಗೆ  ತಿಳಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದ ಹಾಗೂ ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

 

 

 

error: Content is protected !!