ಬೆಳ್ತಂಗಡಿ: ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿ: ನಡ ಗ್ರಾಮದ ಕರಣಿಕರ ಕಚೇರಿ ಸಹಾಯಕ ಸಾವು..!

ಬೆಳ್ತಂಗಡಿ: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಲಾಯಿಲದಲ್ಲಿ ಜೂ.28ರ ಬೆಳಗ್ಗೆ ಸಂಭವಿಸಿದೆ.

ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ತಂಗಡಿ ಕಡೆಯಿಂದ ನಡಗೆ ತೆರಳುತ್ತಿದ್ದ ಬೈಕ್ ಮಧ್ಯೆ ಪುತ್ರಬೈಲು ಎಂಬಲ್ಲಿ ಅಪಘಾತ ಸಂಭವಿಸಿದೆ. ಪರಿಣಾಮ ತ್ರೀವ ಗಾಯಗೊಂಡ ಬಳಂಜ ನಿವಾಸಿ, ನಡ ಗ್ರಾಮದ ಕರಣಿಕರ ಕಚೇರಿ ಸಹಾಯಕ ಜಯರಾಜ್(50) ಆಸ್ಪತ್ರೆ ಸೇರಿಸುವ ಮುನ್ನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!