ಬೆಳ್ತಂಗಡಿ : ಕ್ರೀಡಾ ವಸತಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹೈದರಾಬಾದ್‌ನಲ್ಲಿ ಪತ್ತೆ

ಬೆಳ್ತಂಗಡಿ : ಉಜಿರೆಯ ಕ್ರೀಡಾ ವಸತಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ 20 ದಿನದ ಬಳಿಕ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾಳೆ.

ಉಜಿರೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇ.29 ರಂದು ಬೆಳಗ್ಗೆ 8 ಗಂಟೆಗೆ ಕ್ರೀಡಾಂಗಣಕ್ಕೆ ಹೋಗಿ ಬರುತ್ತೇನೆ ಎಂದು ವಾರ್ಡನ್ ಬಳಿ ಅನುಮತಿ ಪಡೆದುಕೊಂಡು ಹೋದವಳು, ಹಾಸ್ಟೆಲ್‌ಗೂ ವಾಪಸ್ಸು ಬಾರದೇ, ಕಾಲೇಜಿಗೂ ಹೋಗದೇ, ಮನೆಗೂ ಹೋಗದೇ ಕಾಣೆಯಾಗಿದ್ದಳು. ವಿದ್ಯಾರ್ಥಿನಿ ಬಗ್ಗೆ ಕ್ರೀಡಾಂಗಣ, ಕಾಲೇಜು ವಠಾರದಲ್ಲಿ ಹುಡುಕಿದರೂ, ಪೋಷಕರಲ್ಲಿ ಹಾಗೂ ಆಕೆಯ ಸ್ನೇಹಿತರನ್ನು ಸಂಪರ್ಕಿಸಿದಾಗಲೂ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಕ್ರೀಡಾ ವಸತಿ ನಿಲಯ ಸಹಾಯಕ ನಿಲಯ ಪಾಲಕಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಠಾಣೆಯಲ್ಲಿ ವಿದ್ಯಾರ್ಥಿನಿ ಕಾಣೆಯಾದ ದೂರು ದಾಖಲಾದ ಕೂಡಲೆ ಕಾರ್ಯಪ್ರವೃತರಾದ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ಅವರ ನೇತೃತ್ವದ ಸಿಬ್ಬಂದಿ ಚರಣ್ ರಾಜ್ ಮತ್ತು ಬಸವರಾಜ್ ಅವರು ವಿದ್ಯಾರ್ಥಿನಿ ಹೈದರಾಬಾದ್‌ನ, ನಿಜಮಾಬಾದ್ ನ ಸಂಬಂಧಿಕರ ಮನೆಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಜೂ.18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಿದ್ದಾರೆ.

ದೂರದ ಕಾಲೇಜಿಗೆ ಮನೆಯವರು ಸೇರಿಸಿದ್ದರಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೆ ಯಾರಿಗೂ ತಿಳಿಸದೆ ಹೈದರಾಬಾದ್‌ನ ಸಂಬAಧಿಕರ ಮನೆಗೆ ಹೋಗಿರುವುದಾಗಿ ಪೊಲೀಸರಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.

error: Content is protected !!