ಮೇಲಂತಬೆಟ್ಟು ವಿದ್ಯುತ್ ಕೇಬಲ್ ನಲ್ಲಿ ಕಾಣಿಸಿಕೊಂಡ ಬೆಂಕಿ: ಧಗಧಗ ಉರಿಯುವ ಬೆಂಕಿ ನೋಡಿ ದಂಗಾದ ಜನ:

 

 

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ನೂಜೇಲು ಎಂಬಲ್ಲಿ ವಿದ್ಯುತ್ ಕೇಬಲ್ ನಲ್ಲಿ ಬೆಂಕಿ ಕಾಣಿಸಿಕೊಂಡು ಉರಿದ ಘಟನೆ ಜೂ 17 ರ ಸಂಜೆ ನಡೆದಿದೆ.
ನೆರಿಯದಿಂದ ಗುರುವಾಯನಕೆರೆಗೆ ಸರಬರಾಜು ಆಗುವ ಎಸ್ ಎಲ್.ವಿ ಖಾಸಗಿ ಕಂಪನಿಯ ವಿದ್ಯುತ್ ಕೇಬಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಧಗಧಗನೇ ಉರಿಯುತ್ತಿರುವ ಬೆಂಕಿ ನೋಡಿ ಜನರು ಭಯದಿಂದ ಸ್ಥಳೀಯ ಪಂಚಾಯತ್ ಸದಸ್ಯ ಚಂದ್ರರಾಜ್ ಸೇರಿದಂತೆ ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಈ ಕೇಬಲ್ ಹೋದ ಸ್ಥಳಗಳಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತಿದ್ದು ಕೇಬಲ್ ಗುಣಮಟ್ಟ ತೀರ ಕಳಪೆ ಅಥವಾ ಹೈವೋಲ್ಟೇಜ್ ನಿಂದಾಗಿ ಕೇಬಲ್ ಸಾಮರ್ಥ್ಯ ಕಡಿಮೆಯಾಗಿ ಓವರ್ ಲೋಡ್ ಉಂಟಾಗಿ      ಈ ರೀತಿ ಬೆಂಕಿ ಕಾಣಿಸಿಕೊಂಡು ಸಮಸ್ಯೆ ಆಗುತ್ತಿದೆ.ಎಂದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸುತಿದ್ದಾರಲ್ಲದೇ ತಕ್ಷಣ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸುತಿದ್ದಾರೆ.

error: Content is protected !!