ರೇಣುಕಾಸ್ವಾಮಿ ಕೊಲೆ ಪ್ರಕರಣ : ವಿದ್ಯುತ್ ಶಾಕ್‌ನ ಶಾಕಿಂಗ್ ವಿಚಾರ ಬಯಲು.!: ಎಲೆಕ್ಟ್ರಿಕಲ್ ಶಾಕ್ ನೀಡಿದ್ದ ಆರೋಪಿ ಧನರಾಜ್: ಥೇಟ್ ಸಿನಿಮಾ ದೃಶ್ಯದ ಹಾಗೆ ವಿದ್ಯುತ್ ಶಾಕ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಲೇ ಇದೆ. ವಿಚಾರಣೆಯಲ್ಲಿ ಹೀನ ಕೃತ್ಯಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಕೃತ್ಯದಲ್ಲಿ ಬಂಧಿತನಾಗಿರುವ ಧನರಾಜ್ ಜೊತೆಗೆ ಆತನ ಸಹಚರರು ವಿದ್ಯುತ್ ಶಾಕ್ ನೀಡಿದ್ದರು ಎಂಬ ವಿಚಾರ ಈಗ ಹೊರಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಧನರಾಜ್‌ನನ್ನು ಬಂಧಿಸಿದ ಪೊಲೀಸರು, ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಧನರಾಜ್, ಎಲೆಕ್ಟ್ರಿಕ್  ಶಾಕ್ ನೀಡುವ ಮೆಗ್ಗಾರ್ ಅನ್ನು ಹಲವಾರು ತಿಂಗಳಿಂದ ಇಟ್ಟುಕೊಂಡಿದ್ದ ಎಂಬ ವಿಚಾರ ಬಾಯಿಬಿಟ್ಟಿದ್ದಾನೆ.

ನಟ ದರ್ಶನ್ ಮನೆಯಲ್ಲಿ ಸಾಕು ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಧನರಾಜ್, ದರ್ಶನ್ ಜೊತೆ ಆಪ್ತನಾದ ಬಳಿಕ ಇವರ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ. ಫೈನಾನ್ಸ್ ಸರಿಯಾಗಿ ಕಟ್ಟದ ಹಲವರಿಗೆ ಬಂಧಿತ ಆರೋಪಿಯಾಗಿರುವ ವಿನಯ್ ಶೆಡ್‌ನಲ್ಲಿಯೇ ಹಲ್ಲೆ ಮಾಡುತ್ತಿದ್ದ. ಹಲ್ಲೆ ಮಾಡುವಾಗೆಲ್ಲಾ ಧನರಾಜ್ ಜೊತೆಗೆ ಇರುತ್ತಿದ್ದ. ಈ ಹಿಂದೆ ಹಲವಾರು ಜನರಿಗೆ ಹಲ್ಲೆ ಮಾಡುವಾಗ ಇದೇ ಮೆಗ್ಗಾರ್‌ನಿಂದ ಶಾಕ್ ನೀಡಿದ್ದಾರಂತೆ. ಅದು ಹೇಗೆ ಎಂದರೆ ಸಿನಿಮಾದಲ್ಲಿ ನಡೆಯುವ ರೀತಿ . ವ್ಯಕ್ತಿಯನ್ನು ಚೇರ್‌ಗೆ ಕಟ್ಟಿ ಕೂರಿಸಿ ನಂತರ ಶಾಕ್ ನೀಡುತ್ತಿದ್ದರು ಎಂದಿದ್ದಾರೆ ಪೊಲೀಸರು.

error: Content is protected !!