ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಹೂವಿನ ವ್ಯಾಪಾರಿ ಶಿವರಾಮ: ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್‌ನಿಂದ ಆರ್ಥಿಕ ಸಹಾಯ: 2ನೇ ಸೇವಾ ಯೋಜನೆ ಮೂಲಕ 34 ಸಾವಿರ ರೂ. ಸಹಾಯಧನ ಹಸ್ತಾಂತರ

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಹೂವಿನ ವ್ಯಾಪಾರಿ ಶಿವರಾಮ ಅವರಿಗೆ ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್‌ನಿಂದ ಆರ್ಥಿಕ ಸಹಾಯ ನೀಡಲಾಗಿದೆ.

ಕಳಿಯ ಗ್ರಾಮದ ಮೆರ್ಲ ಭೊಮ್ಮನ ಪೂಜಾರಿಯವರ ಮಗ ಬೆಳ್ತಂಗಡಿ  ಸಂತೆಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಶಿವರಾಮ ಇವರು ಗುರುವಾಯನಕೆರೆ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಕಳೆದ ಒಂದುವರೆ ತಿಂಗಳಿನಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೆ ಇವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಇವರು ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ಇವರಿಗೆ 34,000ರೂ ಆರ್ಥಿಕ ಸಹಾಯ ನೀಡಿದೆ.

ಈ ಸಂದರ್ಭದಲ್ಲಿ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಬೆಳ್ತಂಗಡಿ ಟೈಲರ್ಸ್ ಅಸೋಸಿಯೇಷನ್ ನ ವಲಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಜಾದೂಗಾರ್ ಬಿ.ಹೆಚ್ ರಾಜೀವ್.  ದೇವರಾಜ್.  ಯೋಗೀಶ್ ಗೇರುಕಟ್ಟೆ, ಜಯರಾಜ್ ನಡಕರ, ಸುಕೇಶ್ ಪೂಜಾರಿ ಉಪಸ್ಥಿತರಿದ್ದರು.

error: Content is protected !!