ಸಿನಿಮಾ ಕ್ಷೇತ್ರದಿಂದ ನಟ ದರ್ಶನ್ ಬ್ಯಾನ್ ವಿಚಾರ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಯ್ಯಾಕ್ಷನ್: ಬ್ಯಾನ್ ತುಂಬಾ ಸೆಕೆಂಡರಿ ಎಂದ ‘ಮಾಣಿಕ್ಯ’

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಸಿನಿಮಾ ಇಂಡಸ್ಟ್ರೀಯಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿ. ಕೇಸ್ ಆದ ಬಳಿಕ ದರ್ಶನ್ ಯಾವುದೇ ಸಿನಿಮಾದಲ್ಲಿ ನಟಿಸಬಾರದು, ಅವರ ಯಾವುದೇ ಸಿನಿಮಾ ರಿಲೀಸ್ ಮಾಡಬಾರದು ಎಂದು ಫಿಲಂ ಚೇಂಬರ್ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ನೀಡಿದ ಪ್ರತಿಕ್ರಿಯೆ ಹೀಗಿತ್ತು ನೋಡಿ..

‘ನಾವ್ಯಾರು ಕಾನೂನು ಅಲ್ಲ , ದರ್ಶನ್ ಈ ಕೇಸ್ ನಿಂದ ಹೊರಗೆ ಬಂದ್ರೆ ಬ್ಯಾನ್ ಅನ್ನೋದು ಬರೋದೆ ಇಲ್ಲ. ಸಿನಿಮಾ ಚೇಂಬರ್ ಗೆ ಬ್ಯಾನ್ ಮಾಡಿ ಅಂತ ಎಲ್ಲಾರು ಒತ್ತಡ ಹಾಕಿದ್ರೆ ಅವರು ಏನು ಹೇಳೋಕೆ ಆಗುತ್ತೆ ಹೇಳಿ. ಕೆಲ ದಿನಗಳ ಹಿಂದೆ ನನ್ನ ಮೇಲೂ ಬ್ಯಾನ್, ಬ್ಯಾನ್ ಅಂತ ಕೂಗಾಡಿದ್ರು. ಇಷ್ಟಕ್ಕೂ ಇಲ್ಲಿ ಬ್ಯಾನ್ ಅನ್ನೋದು ಮುಖ್ಯ ಅಲ್ಲ. “ನ್ಯಾಯ’’ ಇಲ್ಲಿ ಬಹಳ ಮುಖ್ಯ. ಪೊಲೀಸ್, ಮಾಧ್ಯಮ, ನ್ಯಾಯಾಲಯ ಮುಖ್ಯವೇ ಹೊರತು ಬ್ಯಾನ್ ತುಂಬಾ ಸೆಕೆಂಡರಿ. ನೋವು ತಿಂದಿರೋ ಕುಟುಂಬಕ್ಕೆ ನ್ಯಾಯ ಸಿಗಬೇಕು. ಗಮನ ಆ ಕುಟುಂಬದ ನ್ಯಾಯದ ಮೇಲಿರಲಿ’ ಎಂದಿದ್ದಾರೆ.

error: Content is protected !!