ಜಾರ್ಖಂಡ್ : ರೈಲು ಇಂಜಿನ್‌ನಲ್ಲಿ ಇದ್ದಕ್ಕಿಂತ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಪ್ರಾಣಾ ಉಳಿಸಿಕೊಳ್ಳಲು ಪಾರಾಗಿ ಮತ್ತೊಂದು ರೈಲಿನಡಿಗೆ ಸಿಲುಕಿದ ಘಟನೆ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಬನಾರಸ್- ರಾಂಚಿ ಇಂಟರ್‌ಸಿಟಿ ಎಕ್ಸ್ಪ್ರೆಸ್ ರೈಲು ಕುಮಾಂಡಿಹ್ ರೈಲು ನಿಲ್ದಾಣ ತಲುಪಿದ ತಕ್ಷಣವೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ, ಇತರರಿಗೆ ತಿಳಿಸಿದ್ದಾರೆ. ಈ ವಿಚಾರ ರೈಲಿನ ಎಲ್ಲಾ ಪ್ರಯಾಣಿಕರಿಗೆ ತಿಳಿದು, ತಕ್ಷಣ ಪ್ರಯಾಣಿಕರು ಆತಂಕದಿಂದ ರೈಲಿನಿಂದ ಕೆಳಗಿಳಿದು ಮತ್ತೊಂದು ಟ್ರಾಕ್ ಗೆ ಓಡಲಾರಂಭಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಎದುರುಗಡೆಯಿಂದ ಬಂದ ಗೂಡ್ಸ್ ರೈಲು ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಆದರೆ ಇನ್ನು ಹೆಚ್ಚಿನ ಜನ ಪ್ರಾಣ ಕಾಪಾಡಿದ್ದು ಟೀ ಮಾರುವ ವ್ಯಕ್ತಿ.
ಬೆಂಕಿ ಹತ್ತಿದ ರೈಲಿನಲ್ಲಿ ಚಹಾ ಮಾರುವ ವ್ಯಕ್ತಿಯೂ ಇದ್ದು ಘಟನೆಯ ಸಂದರ್ಭದಲ್ಲಿ ಆ ವ್ಯಕ್ತಿಯೂ ರೈಲಿನಿಂದ ಇಳಿದಿದ್ದಾನೆ. ಬಳಿಕ ಗೂಡ್ಸ್ ರೈಲು ಹಳಿಯಲ್ಲಿ ಬರುತ್ತಿರುವುದನ್ನು ನೋಡಿದ ಆತ, ಜೋರಾಗಿ ಕೂಗುವ ಮೂಲಕ ಹಲವರನ್ನು ಹಳಿಯಿಂದ ಹೊರಕ್ಕೆ ಬರುವಂತೆ ತಿಳಿಸಿದ್ದಾನೆ. ಹಲವು ಜನರನ್ನು ಟ್ರಾö್ಯಕ್ ಮೇಲೆ ಹೋಗದಂತೆ ತಡೆದಿದ್ದಾನೆ.