ಕಾಶಿಬೆಟ್ಟು : 2 ದ್ವಿಚಕ್ರ ವಾಹನಕ್ಕೆ ಇನೋವಾ ಡಿಕ್ಕಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಇಬ್ಬರು ಸವಾರರು

ಬೆಳ್ತಂಗಡಿ: 2 ದ್ವಿಚಕ್ರ ವಾಹನಕ್ಕೆ ಇನೋವಾ ಡಿಕ್ಕಿಯಾಗಿ ಎರಡೂ ದ್ವಿಚಕ್ರ ವಾಹನಗಳು ಸಂಪೂರ್ಣ ಹಾನಿಗೊಳಗಾದ ಘಟನೆ ಜೂ.15ರಂದು ಕಾಶಿಬೆಟ್ಟುವಿನಲ್ಲಿ ಸಂಭವಿಸಿದೆ.

ಧರ್ಮಸ್ಥಳ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ 2 ದ್ವಿಚಕ್ರ ವಾಹನಕ್ಕೆ ಬೆಳ್ತಂಗಡಿ ಕಡೆಯಿಂದ ಧರ್ಮಸ್ಥಳ ಕಡೆ ಹೋಗುತ್ತಿದ್ದ ಇನೋವಾ ಡಿಕ್ಕಿಯಾಗಿದೆ. ಘಟನೆಯಲ್ಲಿ ಮೂರು ವಾಹನಗಳಿಗೂ ಹಾನಿಯಾಗಿದ್ದು ಎರಡೂ ದ್ವಿಚಕ್ರ ವಾಹನಗಳಂತೂ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಗಾಯಗೊಂಡ ಇಬ್ಬರು ಸವಾರರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಣಿ ಅಪಘಾತವನ್ನು ಕಣ್ಣಾರೆ ಕಂಡ ಸ್ಥಳೀಯರು ‘ಇಬ್ಬರು ಸವಾರರು ಬದುಕ್ಕಿದ್ದೇ ಪುಣ್ಯ’ ಎನ್ನುತ್ತಿದ್ದರು.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಆಗಮಿಸಿದ್ದಾರೆ.

error: Content is protected !!