ಸಾಂದರ್ಭಿಕ ಚಿತ್ರ
ಬ್ಯಾಂಕ್ ನಲ್ಲಿ ಸಾಲಾಗಿ ನಿಂತು ತಮ್ಮ ಉಳಿತಾಯ ಖಾತೆಯಿಂದ ನಗದು ಪಡೆಯುವ ಜನ ಈಗ ಕಡಿಮೆಯಾಗಿದ್ದು ಏನೇ ಇದ್ದರೂ, ಎಲ್ಲೇ ಹೋದರೂ ಎಟಿಎಂ ಬಳಸಿ ನಗದು ಪಡೆದುಕೊಳ್ಳಲಾಗುತ್ತಿದೆ. ಆದರೆ ಪದೇ ಪದೇ ಎಟಿಎಂ ಬಳಸುವ ಗ್ರಾಹಕರಿಗೆ ಇನ್ನು ಮುಂದೆ ಹೆಚ್ಚಿನ ಶುಲ್ಕದ ಬರೆ ಬೀಳುವ ಸಾಧ್ಯತೆ ಇದೆ.
ಎಟಿಎಂನಿಂದ ಮಿತಿ ಮೀರಿದ ವಹಿವಾಟಿಗೆ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳ ಮಿತಿ ಮೀರಿದ ವಹಿವಾಟಿಗೆ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳ ಮಾಡುವ ಸಲುವಾಗಿ ದೇಶದ ಎಟಿಎಂ ಆಪರೇಟರ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ವನ್ನು ಸಂಪರ್ಕಿಸಿದ್ದು, ಗ್ರಾಹಕರು ನಗದು ಹಿಂಪಡೆಯುವಿಕೆಯ ಮೇಲೆ ಪಾವತಿಸುವ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಮನವಿಯನ್ನು ಮಾಡಿದ್ದಾರೆ.
ಎಟಿಎಂ ವಹಿವಾಟುಗಳ ಇಂಟರ್ ಚೇಂಜ್ ಶುಲ್ಕವನ್ನು 2021ರಲ್ಲಿ ₹15 ರಿಂದ ₹17 ಕ್ಕೆ ಹೆಚ್ಚಿಸಲಾಗಿತ್ತು, ಆದರೆ ಇದೀಗ ಎಟಿಎಂ ಉದ್ಯಮದ ಒಕ್ಕೂಟ ವ್ಯವಹಾರಕ್ಕೆ ಹೆಚ್ಚಿನ ಹಣವನ್ನು ಪಡೆಯಲು ಪ್ರತಿ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು ಗರಿಷ್ಠ 23 ರೂಪಾಯುಗೆ ಹೆಚ್ಚಿಸಲು ಆರ್‌ಬಿಐಗೆ ಕೋರಿದೆ. ಎಟಿಎಂ ನಿರ್ವಾಹಕರ ಮನವಿಯಂತೆ ಆರ್‌ಬಿಐ ಗ್ರೀನ್ ಸಿಗ್ನಲ್ ನೀಡಿದರೆ 23ರೂಗೆ ಹೆಚ್ಚಳ ಆಗಲಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ದೆಹಲಿಯಂತಹ 6 ಪ್ರಮುಖ ನಗರಗಳಲ್ಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆ ಗ್ರಾಹಕರಿಗೆ ತಿಂಗಳಿಗೆ ಕನಿಷ್ಠ 5 ಉಚಿತ ವಹಿವಾಟುಗಳನ್ನು ನೀಡುತ್ತಿವೆ. ಇತರೆ ಬ್ಯಾಂಕ್‌ಗಳ ಎಟಿಎಂಗಳು ತಿಂಗಳಿಗೆ 3 ಉಚಿತ ವಹಿವಾಟುಗಳನ್ನು ನೀಡುತ್ತವೆ. ಈ ಮಿತಿಯನ್ನು ಮೀರಿದಾಗ ಶುಲ್ಕವನ್ನು ವಿಧಿಸಲಾಗುತ್ತದೆ.