ಕುವೈತ್: ಅಗ್ನಿ ದುರಂತದಲ್ಲಿ ಅಸುನೀಗಿದ ಭಾರತೀಯರು: ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರಗಳು

ಕೇರಳ: ಕುವೈತ್‌ನ ಅಲ್-ಮಂಗಾಫ್ ಕಟ್ಟಡದಲ್ಲಿ ಜೂನ್ 12ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ, ಮೃತಪಟ್ಟ ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತೀಯ ವಾಯುಪಡೆಯ (ಐಎಎಫ್) ವಿಮಾನದ ಮೂಲಕ ಕೊಚ್ಚಿನ್ ಗೆ ತರಲಾಗಿದೆ.

ಘಟನೆಯಲ್ಲಿ 49 ಜನರು ಸಾವನ್ನಪ್ಪಿದ್ದು ಮತ್ತು ಅವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ 31 ಜನರ ಮೃತದೇಹಗಳನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.


31 ಮೃತದೇಹಗಳಲ್ಲಿ ಕೇರಳದ 23 ಜನರ ಮೃತದೇಹಗಳು, ತಮಿಳುನಾಡಿನ 7 ಜನರ ಮೃತದೇಹಗಳು ಮತ್ತು ಕರ್ನಾಟಕದ ಮೂಲಕ ಒಬ್ಬರ ಮೃತದೇಹವೂ ಇದರಲ್ಲಿ ಸೇರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೈಗಾರಿಕೆ ಸಚಿವ ಪಿ. ರಾಜೀವ್, ಕಂದಾಯ ಸಚಿವ ಕೆ. ರಾಜನ್ ಮತ್ತು ಇತರ ಅಧಿಕಾರಿಗಳು ಮೃತದೇಹಗಳನ್ನು ಪಡೆಯಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

error: Content is protected !!