ಉಜಿರೆ: ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ: ಡಾನ್ಸ್ ಬ್ಯಾಟಲ್ – 2024: ನೃತ್ಯ ತರಗತಿಯಲ್ಲಿ ನೃತ್ಯ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಉಜಿರೆ : ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಇಲ್ಲಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ – ಡಾನ್ಸ್ ಬ್ಯಾಟಲ್ – 2024 – ಜೂ 2 ರಂದು ಉಜಿರೆ ಹಿಪ್ ಬಾಯ್ಸ್ ನೃತ್ಯ ಸಂಸ್ಥೆಯಲ್ಲಿ ನಡೆಯಿತು.

ಅಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ಅಳದಂಗಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟಿಸಿದರು. ಈ ಮೂಲಕ ವರ್ಷದ ನೃತ್ಯ ತರಬೇತಿ ತರಗತಿಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಸಹನ್ ಎಂ.ಎಸ್ ಉಜಿರೆ, ತೀರ್ಪುಗಾರರಾದ ಭರತ್,
ಸುಮನಾ, ವೈಷ್ಣವಿ, ಚೇತನ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೃತ್ಯ ತರಗತಿಯ ಸೀನಿಯರ್ಸ್ ವಿದ್ಯಾರ್ಥಿಗಳಾದ ಚಿಂತನ್ , ಪ್ರಣಂ, ಪ್ರೀತಂ ಸುಶಾಂತ್ ,ಕೀರ್ತನಾ ,ರೇಖಾ, ಪ್ರಾಪ್ತಾ ಹೆಗ್ಡೆ , ದೀಕ್ಷಿತ್ ಅಶ್ವಿತಾ,ಅನುಶ್ರೀ ಅನ್ವಿತಾ,ಹಿಮಾಲಿ, ನಿಖಿತಾ ಹೆಗ್ಡೆ ,ಕವನಶ್ರೀ ಜೈನ್ ಹಾಗೂ ಆಮಂತ್ರಣ ಪರಿವಾರದ ಪ್ರಸಾದ್ ನಾಯಕ್ ಕಾರ್ಕಳ, ಅರುಣ್ ಜೈನ್ ಅಳದಂಗಡಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ವಿಜಯಚ್ಚಂದ್ರ ಮುಂಡ್ಲಿ ಭಾಗವಹಿಸಿದ್ದರು.


ನೃತ್ಯ ಸ್ಪರ್ಧೆಯ ವಿಜೇತರು

ವಿಶೇಷ ನೃತ್ಯ ಸ್ಪರ್ಧೆಯಲ್ಲಿ:
ಧೃತಿ ಟಿ. ಎಸ್ ಉಜಿರೆ – ಪ್ರಥಮ
ಮನ್ವಿತಾ ಪ್ರಭು – ದ್ವಿತೀಯ
ಬೆಸ್ಟ್ ಎಕ್ಸ್ ಪ್ರೆಷನ್ ಅನ್ವಿತಾ ಉಜಿರೆ
ಎನರ್ಜಿಟಿಕ್ ಡಾನ್ಸರ್ ಸಮನ್ವಿ ಉಜಿರೆ,
ಸ್ಟೈಲಿಶ್ ಡಾನ್ಸರ್ ಆಪ್ತ ಉಜಿರೆ ಮತ್ತು ಸನ್ಮಿತಾ ಕುಕ್ಕಾವು ಬಹುಮಾನ ಪಡೆದುಕೊಂಡರು.

ಅನ್ವಿತಾ ಸ್ವಾಗತಿಸಿ, ಪ್ರಾಪ್ತಾ ಹೆಗ್ಡೆ ಧನ್ಯವಾದ ಸಲ್ಲಿಸಿದರು. ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು.

 

ಹಳ್ಳಿ ಮಕ್ಕಳ ಡಾನ್ಸ್ ಕನಸಿಗೆ ಬಣ್ಣ ತುಂಬಿದ ಡಾನ್ಸ್ ಮಾಸ್ಟರ್ ಸಹನ್ ಎಂ.ಎಸ್

error: Content is protected !!