ಬೆಳ್ತಂಗಡಿ: ಜಾತಿನಿಂದಿಸಿ ಹಲ್ಲೆ..!: ಮೂವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆ ಗ್ರಾಮದ ಮೇಲಿನ ಮಚಾರು ಎಂಬಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆದ ಘಟನೆ ಜೂ.02 ರಂದು ಸಂಜೆ ನಡೆದಿದೆ.

ಅಶ್ವಥ್ (21) ಎಂಬವರು ನಿನ್ನೆ ಸಂಜೆ ಮಚಾರು ಎಂಬಲ್ಲಿರುವಾಗ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದು ಹಲ್ಲೆ ಮಾಡಿದ್ದು ಕರುಣಾಕರ ಗೌಡ ಎಂಬವರು ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಅಶ್ವಥ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಆರೋಪಿಗಳ ವಿರುದ್ಧ ಅಕ್ರ ನಂ 64/2024, ಕಲಂ: 341,323,324,ಜೊತೆಗೆ 34 ಬಾ ದಂ ಸಂ ಮತ್ತು ಕಲಂ 3(1)(S) SC/ST ACT 2015 ರಂತೆ ಪ್ರಕರಣ ದಾಖಲಾಗಿದೆ.
ಗಾಯಾಳು ಅಶ್ವಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!