ಕಡಿರುದ್ಯಾವರ: ತಡರಾತ್ರಿ ತೋಟಕ್ಕೆ ಕಾಡಾನೆ ದಾಳಿ: ನಾಯಿಯನ್ನು ಬೆನ್ನತ್ತಿ ಮನೆ ಅಂಗಳದಲ್ಲಿ ಘೀಳಿಟ್ಟ ಒಂಟಿಸಲಗ.!

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವು ಕಡೆ ಮೇ.26ರ ತಡರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಕೃಷಿ ನಾಶ ಪಡಿಸಿದೆ.

ಬಸವದಡ್ಡು ಶಂಕರ್ ಭಟ್, ನಡ್ತಂಡ ಮಹೇಶ್ ಭಟ್, ನೀಲಯ್ಯ ಗೌಡ ,ಪ್ರವೀಣ್ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿದ ಕಾಡನೆ ಅಡಕೆ,ಬಾಳೆ ಗಿಡಗಳನ್ನು ನಾಶಪಡಿಸಿದೆ. ಇದಿಷ್ಟೇ ಅಲ್ಲದೆ ರಾಮಚಂದ್ರ ಗೌಡ ಎಂಬವರ ಸಾಕು ನಾಯಿ ಆನೆಯನ್ನು ಕಂಡು ಬೊಗಳುತ್ತ ಹೋಗಿದ್ದು ಈ ಸಮಯ ಆನೆ ಅವರ ಮನೆ ತನಕ ನಾಯಿಯನ್ನು ಓಡಿಸಿ ಮನೆ ಅಂಗಳದಲ್ಲೇ ನಿಂತು ಘೀಳಿಟ್ಟಿದೆ. ಈ ವೇಳೆ ಮನೆಯವರು ಭೀತರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಅನೇಕ ಕಡೆಗಳಲ್ಲಿ ದಿನೇ ದಿನೆ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು ಕೃಷಿಕರು ಆತಂಕದಲ್ಲಿದ್ದಾರೆ.

error: Content is protected !!