ದ.ಕ: ರಾಜ್ಯಾದ್ಯಂತ ಪೂರ್ವ ಮುಂಗಾರು ಅಬ್ಬರಿಸುತ್ತಿದೆ. ಅನೇಕ ಕಡೆ ಪ್ರತೀ ದಿನ ಗಾಳಿ, ಮಳೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬಹಳಷ್ಟು ಕಡೆಗಳಲ್ಲಿ ಮಳೆಯ ಸಿಂಚನವಾಗಿದೆ. ಈ ಮಧ್ಯೆ ಮುಂಗಾರು ಮಳೆ ಭರ್ಜರಿಯಾಗಿ ಎಂಟ್ರಿ ಕೊಡುವ ಮುನ್ಸೂಚನೆ ಸಿಕ್ಕಿದೆ.
2024ರಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದು ಈಗ ಮಾಹಿತಿ ನೂರಕ್ಕೆ ನೂರರಷ್ಟು ನಿಜವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಕಾರಣ ಮೇ 31ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಮಳೆಯ ಮಾರುತಗಳು ಆಗಮಿಸಲಿವೆ. ಹೀಗಾಗಿ ಜೂ.02 ಅಥವ 3ಕ್ಕೆ ಕರಾವಳಿ ಭಾಗಕ್ಕೆ ಮಾನ್ಸೂನ್ ಮಾರುತಗಳು ಎಂಟ್ರಿ ಕೊಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಾರಿ ಮುಂಗಾರು ಮಳೆ ಕರ್ನಾಟಕದಲ್ಲಿ ಯಥೇಚ್ಛ ಸುರಿಯಲಿದೆ ಎನ್ನಲಾಗಿದೆ. ಸಧ್ಯಕ್ಕೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಕರಾವಳಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನು ಓದಿ: http://prajaprakasha.com/?p=27727