ಬೆಳ್ತಂಗಡಿ: ಕಲ್ಲುಗಣಿಗಾರಿಕೆ ಆರೋಪದಡಿ ಬೆಳ್ತಂಗಡಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಮೇ.18ರಂದು ರಾತ್ರಿ ಬಂಧಿಸಿದ್ದು, ಬಂಧನವನ್ನು ವಿರೋಧಿಸಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಮೇ.20ರಂದು ಪ್ರತಿಭಟನೆಯು ನಡೆಯಿತು.ಲಾಯಿಲದಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿದ ಹೋರಾಟಗಾರರು ತಹಶೀಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಿನಿ ವಿಧಾನ ಸೌಧದ ಎದು ನಡೆದ ಪ್ರತಿಭಟನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಕಾಂಗ್ರೆಸ್ ಏಜೆಂಟ್ ರಂತೆ ಕೆಲಸ ಮಾಡುತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಿದೆ. ಆದ್ದರಿಂದ ಬೆಳ್ತಂಗಡಿ ಮಿನಿ ವಿಧಾನ ಸೌದ ಅಲ್ಲ ಕಾಂಗ್ರೆಸ್ ಕಛೇರಿ ಎಂದು ಹೇಳಿ ಬೆಳ್ತಂಗಡಿ ಮಿನಿ ವಿಧಾನ ಸೌಧಕ್ಕೆ ‘ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿ’ ಎಂಬ ನಾಮಫಲಕ ಅಳವಡಿಸಿದರು.
‘ದಂಡಪಿಂಡನಾದ ಬೆಳ್ತಂಗಡಿ ದಂಡಾಧಿಕಾರಿ’ ‘ಹಿಂದೂಗಳನ್ನು ಧಮನಿಸುವ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ’ ಮುಂತಾದ ಅನೇಕ ಬ್ಯಾನರ್‌ಗಳು ಪ್ರತಿಭಟನೆಯಲ್ಲಿ ರಾರಾಜಿಸುತ್ತಿತ್ತು.
ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.