ಬಸ್ ಕಿಟಕಿಯಲ್ಲಿ ಸಿಲುಕಿದ ಮಹಿಳೆಯ ತಲೆ…!!!ಉಗುಳುವ ಭರದಲ್ಲಿ ತಲೆ ಲಾಕ್…! : ಅರ್ಧ ಗಂಟೆಗೂ ಹೆಚ್ಚು ಕಾಲ ಒದ್ದಾಡಿದ ಮಹಿಳೆ…

ಬೆಂಗಳೂರು: ಬಸ್ಸಿನ ಕಿಟಕಿಯಲ್ಲಿ ಮಹಿಳೆಯೊಬ್ಬರ ತಲೆ ಸಿಕ್ಕಿಹಾಕಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆ.ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡಿದೆ. ಬಸ್ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದ್ದಾರೆ. ಆದರೆ ಹಾಗೆ ಹೊರ ಹಾಕಿದ ತಲೆ ವಾಪಸ್ ಒಳಗೆ ಬಾರದೇ ಅಲ್ಲೆ ಲಾಕ್ ಆಗಿಬಿಟ್ಟಿದೆ. ತಲೆಯನ್ನು ಲಾಕ್ ನಿಂದ ಬಿಡಿಸಿಕೊಳ್ಳಲು ಮಹಿಳೆ ಸತತ ಪ್ರಯತ್ನ ಪಟ್ಟಿದ್ದು ಆದರೆ ಯಶಸ್ಸಾಗಲೇ ಇಲ್ಲ.

 

ಮಹಿಳೆಯ ತಲೆ ಗಮನಿಸಿದ ಬಸ್ ನ ಚಾಲಕ ಹಾಗು ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ ಅತ್ಯಂತ ಜಾಗರೂಕತೆಯಿಂದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.

error: Content is protected !!