ಉಜಿರೆ ರಸ್ತೆ ಮಧ್ಯೆಯೇ ಬಸ್ ತಂಗುದಾಣ..!: ನಡು ರಸ್ತೆಯಲ್ಲಿ ಪ್ರಯಾಣಿಕರ ಪಿಕಪ್ ಟ್ರಾಫಿಕ್ ಜಾಮ್ ಆದ್ರೂ ಡೋಂಟ್ ಕೇರ್:

 

 

ಬೆಳ್ತಂಗಡಿ: ದಿನಂಪ್ರತಿ ವಾಹನ ದಟ್ಟಣೆಯಲ್ಲಿರುವ ಉಜಿರೆಯಲ್ಲಿ ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಪಿಕಪ್ ಮಾಡುತ್ತಿರುವ ಕೆಎಸ್ಆರ್ ಟಿಸಿ ಬಸ್ ಗಳಿಂದಾಗಿ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ ಘಟನೆ  ಉಜಿರೆಯಲ್ಲಿ ನಡೆದಿದೆ. ಧರ್ಮಸ್ಥಳದಿಂದ  ಕೆಎಸ್ ಆರ್ ಟಿ ಸಿ ಬಸ್ ಗಳು ತಾ ಮುಂದೆ ನಾ ಮುಂದೆ ಎಂಬಂತೆ ಪೈಪೋಟಿಗಿಳಿದ ರೀತಿಯಲ್ಲಿ ಉಜಿರೆ ಧ್ವಾರದ ಬಳಿ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತ ನಿಲ್ದಾಣದಲ್ಲಿ ನಿಲ್ಲಿಸಿದಂತೆ ರಸ್ತೆಯಗಲಕ್ಕೂ ಬಸ್ ನಿಲ್ಲಿಸಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಮಾಡಿದ್ದರಿಂದ ಇತರ ವಾಹನ ಸಂಚಾರಕ್ಕೂ ತೊಂದರೆಯುಂಟು ಮಾಡಿದ್ದಾರೆ.‌ಇಲ್ಲೇ ಟ್ರಾಫಿಕ್ ಪೊಲೀಸ್ ಇದ್ದರೂ ಬಸ್ ಡ್ರ್ರೈವರ್ ಗಳ ಆಟ ನೋಡುತ್ತ ಸುಮ್ಮನೆ ನಿಂತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಾಹನ ಸವಾರರೊಬ್ಬರು ಕೆಎಸ್ ಆರ್ ಟಿ ಸಿ ಯವರನ್ನು ಕೇಳುವವರು ಇಲ್ಲದಂತಾಗಿದೆ. ಸಣ್ಣ ವಾಹನ, ದ್ವಿಚಕ್ರ ಸವಾರರು ರಸ್ತೆಯಲ್ಲಿ ಸಂಚಾರಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಎಲ್ಲೆಂದರಲ್ಲಿ ನಡು ರಸ್ತೆಯಲ್ಲೇ ಬಸ್ ನಿಲ್ಲಿಸುವುದು ಮಾಮೂಲಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚರಿಕೆ ನೀಡುವ ಅಗತ್ಯ ಇದೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ.

error: Content is protected !!