ಬೇಲೂರು: ಕೋಳಿ ಹಿಡಿಯಲು ಬಂದ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಬೇಲೂರು ತಾಲ್ಲೂಕು ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಮೇ.10ರ ರಾತ್ರಿ ಸಂಭವಿಸಿ
ಆಹಾರ ಅರಸಿ ಬಂದ ಚಿರತೆ ಚಂದ್ರಯ್ಯ ಎಂಬುವರ ಮನೆಯ ಕೊಟ್ಟಿಗೆ ಬಳಿ ಬಂದಿದ್ದು, ಚಿರತೆ ನೋಡಿದ ಕೋಳಿಗಳು ಹೆದರಿ ಮರಕ್ಕೆ ಹಾರಿವೆ. ಈ ವೇಳೆ ಚಿರತೆಯು ಸಹ ಕೋಳಿಗಳನ್ನು ಬೇಟೆಯಾಡುವ ಭರದಲ್ಲಿ ಮರವನ್ನು ಹತ್ತಿದೆ. ಆಗ ಕೋಳಿಗಳ ರಕ್ಷಣೆಗೆಂದು ಇಟ್ಟಿದ್ದ ಉರುಳಿನ ತಂತಿಗೆ ಚಿರತೆಯ ಮುಂಗಾಲು ಸಿಲುಕಿಕೊಂಡಿದೆ. ಚಿರತೆ ಉರುಳಲ್ಲಿ ಹೊರಳಾಡುವುದನ್ನು ಕಂಡು ನಾಯಿಗಳು ಬೊಗಳಲು ಆರಂಭಿಸಿದ್ದು ಗ್ರಾಮದ ಜನರು ಬಂದು ನೋಡಿದಾಗ ಚಿರತೆಯ ಪರದಾಡುತ್ತಿರುವುದು ಕಂಡು ಬಂದಿದೆ.
ತಕ್ಷಣ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಆದರೆ ಅಧಿಕಾರಿಗಳು ಬರುವ ಮುನ್ನವೆ ಚಿರತೆ ಪರದಾಡಿ, ಹೊರಳಾಡಿ ಉರುಳಿನಿಂದ ಎಸ್ಕೇಪ್ ಆಗಿದೆ.
ಚಿರತೆಯನ್ನು ಕಂಡ ಗ್ರಾಮಸ್ಥರು ಆತಂಕದಲ್ಲಿದ್ದು , ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಸದ್ಯ ಸೆರೆಗಾಗಿ ಬೋನನ್ನು ಇರಿಸಲಾಗಿದೆ.