ರಸ್ತೆ ಬದಿ ಬಿದ್ದಿತ್ತು ಬ್ಯಾಗ್: ಬೈಕ್ ಸವಾರನಿಗೆ ಸಿಕ್ತು ಕಂತೆ ಕಂತೆ ಹಣ!: ಅನಾಯಸವಾಗಿ ಸಿಕ್ಕ ಹಣವನ್ನು ಏನ್ ಮಾಡ್ದ ಗೊತ್ತಾ?

ಒಡಿಶಾ: ಮನೆಯಿಂದ ಕೆಲಸಕ್ಕೆ ಹೊರಟ ವ್ಯಕ್ತಿಗೆ ದಾರಿ ಮಧ್ಯೆ ಕಂತೆ ಕಂತೆ ಹಣ ತುಂಬಿದ್ದ ಬ್ಯಾಕ್ ಸಿಕ್ಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಬಡಗಿ ಕೆಲಸ ಮಾಡುತ್ತಿದ್ದ ಸೂರಜ್ 2 ದಿನಗಳ ಹಿಂದೆ ಬೈಕ್ ನಲ್ಲಿ ತನ್ನ ಊರಿನಿಂದ ನಿರ್ಮಲಝರಕ್ಕೆ ಹೊರಟಿದ್ದ. ಈ ವೇಳೆ ರಸ್ತೆ ಬದಿ ಬ್ಯಾಗ್ ಬಿದ್ದಿತ್ತು. ಬೈಕ್ ನಿಲ್ಲಿಸಿ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ.

ಪ್ರಾಮಾಣಿಕತೆ ಮೆರೆದ ಯುವಕ ಆ ಕ್ಷಣವೆ ಕಲ್ಲಿಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್ ಪರಿಶೀಲಿಸಿದ್ದು, ಈ ವೇಳೆ ಬ್ಯಾಗ್ ನಲ್ಲಿ 90 ಸಾವಿರ ರೂ. ಹಣ ಜೊತೆಗೆ ಔಷಧಗಳು, ಕೆಲವು ದಾಖಲೆಗಳು ಪತ್ತೆಯಾಗಿವೆ.

ಬ್ಯಾಗಿನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಅದು ಆಂದ್ರದ ವೈಜಾಗ್‌ನ ಮೆಡಿಕಲ್ ರೆಪ್ರೆಸೆಂಟೇಟೀವ್‌ಗೆ ಸೇರಿದ್ದು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಕೂಡಲೇ ಸಂತ್ರಸ್ತರಿಗೆ ಮಾಹಿತಿ ನೀಡಿ ಬ್ಯಾಗ್ ವಾಪಸ್ ನೀಡಲಾಯಿತು.

ಸೂರಜ್ ಪ್ರಾಮಾಣಿಕತೆಗೆ ಪೊಲೀಸರು ಹಾಗೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!