ಲೋಕಸಭಾ ಚುನಾವಣೆ 2024: ದ.ಕ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ: ವಿಭಿನ್ನ ಕಾರ್ಯಕ್ರಮಗಳ ಆಯೋಜನೆ


ಬೆಳ್ತಂಗಡಿ: 2024ರ ಲೋಕಸಭಾ ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿಭಿನ್ನ ಕಾರ್ಯಕ್ರಗಳು ನಡೆದಿದ್ದು ಈ ಬಗ್ಗೆ ಏ.24ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವೀಪ್ ಸಮಿತಿ ಮಾಹಿತಿ ನೀಡಿದೆ.

ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ 241 ಬಿ.ಎಲ್.ಓ ಗಳಿಗೆ ಒಂದು ದಿನದ ತರಬೇತಿ, ತಾಲೂಕಿನ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜಿನ ನೂರಕ್ಕೂ ಹೆಚ್ಚು ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಒಂದು ದಿನದ ತರಬೇತಿ, ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಮತದಾರರ ಸಾಕ್ಷರತಾ ಸಂಘಗಳ ರಾಯಭಾರಿಗಳಿಗೆ ಒಂದು ದಿನದ ತರಬೇತಿ ನೀಡಲಾಗಿದೆ. ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಕ್ರಿಯಾ ಯೋಜನೆಯಂತೆ ಸಂಪನ್ಮೂಲ ವ್ಯಕ್ತಿಗಳು ಮತ್ತು ಗ್ರಾಮ ಪಂಚಾಯತ್ ಗಳ ಸಹಕಾರದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾದ ನಾರಾವಿ, ನಡ & ಚಾರ್ಮಾಡಿ ವ್ಯಾಪ್ತಿಯಲ್ಲಿ ಗ್ರಾಮದಲ್ಲಿ ಬೀದಿ ನಾಟಕ, ಪ್ರತಿ ಮನೆಗೆ ಮನವಿ ಪತ್ರ ಹಂಚಿಕೆ ಮತ್ತು ಭವಿಷ್ಯದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಯುವ ಮತ್ತು ಭವಿಷ್ಯದ ಮತದಾರರೊಂದಿಗೆ ಸಂವಾದ, ಪೋಸ್ಟರ್ ಅಭಿಯಾನ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. 48 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ, ಎನ್.ಆರ್. ಎಲ್.ಎಂ ಸಂಜಿವಿನಿ ಯೋಜನೆಯ ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಪಶುಸಖಿ, ಕೃಷಿ ಸಖಿ ಹಾಗೂ ವಿಶೇಷ ಚೇತನ ಪ್ರತಿನಿಧಿಗಳಿಗೆ ತರಬೇತಿ ನೀಡಿ ಅವರ ಮೂಲಕ ಮಹಿಳಾ ಮತದಾರರು ಮತ್ತು ವಿಶೇಷ ಚೇತನ ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಶ್ರೀ ಪಿ.ಎಸ್ ವಸ್ತçದ್ ನೇತೃತ್ವದಲ್ಲಿ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಸುಲ್ಕೇರಿಯಲ್ಲಿ ಮಲೆಕುಡಿಯ ಸಮುದಾಯದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಶ್ರೀ ವೈಜಣ್ಣರವರ ನೇತೃತ್ವದಲ್ಲಿ ತಾಲೂಕಿನ ಎರಡು ಅನನ್ಯ ಮತಗಟ್ಟೆ ಎನಿಸಿರುವ ಬಾಂಜಾರು ಮಲೆ, ಮತಗಟ್ಟೆ (ಮ.ಸಂ 86) ಮತ್ತು ಎಳನೀರು ಮತಗಟ್ಟೆ ಸಂಖ್ಯೆ 15 ರಲ್ಲಿ ಶೇಕಡ 100 ರಷ್ಟು ಮತದಾನ ಮಾಡಿಸುವುದಕ್ಕಾಗಿ ಮತದಾರರೊಂದಿಗೆ ಹಲವು ಸುತ್ತಿನ ಸಂವಾದ ಕಾರ್ಯಕ್ರಮ, ಬಾಂಜಾರು ಮಲೆಯ ಮಲೆಕುಡಿಯ ಸಮುದಾಯದ ಮತದಾರರೊಂದಿಗೆ ವಿಶೇಷ ಸಂವಾದ, 9 ಮಾದರಿ ಮತಗಟ್ಟೆಗಳನ್ನು ಗುರುತಿಸಿದ್ದು, ಅದರಲ್ಲಿ ಐದು ಸಖಿ ಮತಗಟ್ಟೆ ಹಾಗೂ ತಲಾ ಒಂದರಂತೆ ವಿಶೇಷ ಚೇತನರ ನಿರ್ವಹಣೆ , ಯುವಜನ, ಧ್ಯೇಯಾಧಾರಿತ ಮತ್ತು ಸಾಂಪ್ರದಾಯಿಕ ಮತಗಟ್ಟೆಗಳಿಗೆ ವರ್ಣರಂಜಿತ ಚಿತ್ತಾಕರ್ಷಣೆ ನೀಡಲಾಗಿದ್ದು ಇದರ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ , ಉಜಿರೆ ಬಸ್ ನಿಲ್ದಾಣ ಸೇರಿದಂತೆ ಆಯ್ದ 5 ಕಡೆಗಳಲ್ಲಿ ಸೆಲ್ಫಿ ಪಾಯಿಂಟ್ ತೆರೆಯಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಶ್ರೀ ವೈಜಣ್ಣ , ತಾಲೂಕು ಪಂಚಾಯತ್ ಅಧೀಕ್ಷಕರಾದ ಡಿ. ಪ್ರಶಾಂತ್ ಬಳಂಜ, ತಾಲೂಕು ಪಂಚಾಯತ್ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಮಾಸ್ಟರ್ ಟ್ರೆöÊನರ್ ಯೋಗೇಶ ಹೆಚ್.ಆರ್, ತಾಲೂಕು ಸ್ವೀಪ್ ಸಮಿತಿಯ ಮಾಸ್ಟರ್ ಟ್ರೆöÊನರ್ ದಿವ್ಯಾ ಕುಮಾರಿ ಹಾಗೂ ಶುಭ ಕೆ ಉಪಸ್ಥಿತರಿದ್ದರು.

error: Content is protected !!