ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಪ್ರವೀಣ್ ಪೂಜಾರಿ ಬಿಜೆಪಿಗೆ ಸೇರ್ಪಡೆ

ಬೆಳ್ತಂಗಡಿ: ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದ್ದಂತೆ ಕಾರ್ಯಕರ್ತರ ಪಕ್ಷಾಂತರ ಪರ್ವ ಹೆಚ್ಚಾಗುತ್ತಿದೆ.

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಪ್ರವೀಣ್ ಪೂಜಾರಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಹಾಗೂ ಶಾಸಕರಾದ ಹರೀಶ ಪೂಂಜರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಕೊಯ್ಯೂರು ಶಕ್ತಿಕೇಂದ್ರ ಅಧ್ಯಕ್ಷರಾದ ತಾರಾನಾಥ ಗೌಡ, ಹಾಲು ಉತ್ಪಾದಕರ ಸಂಫದ ಅಧ್ಯಕ್ಷ ಪ್ರಮೋದ್ ಹಲೆಕ್ಕಿ, ಪಂಚಾಯತ್ ಸದಸ್ಯ ಗಿರೀಶ್ ಆಚಾರಿ ಬೂತ್ ಅಧ್ಯಕ್ಷ ಸುರೇಶ ನಾಯ್ಕ್, ವಿಶ್ವನಾಥ ಗಾಂಜಾಲು, ಯೋಗೀಶ್ ಪೂಜಾರಿ ಜೊತೆಗಿದ್ದರು.

error: Content is protected !!