ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್: 2024-25 ಸಾಲಿನ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷರಾಗಿ ವಾಲ್ಟರ್ ಡಿ’ಸೋಜಾ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್‌ನ 2024-25 ಸಾಲಿನ ನೂತನ ಅಧ್ಯಕ್ಷರಾದ ವಾಲ್ಟರ್ ಸಿಕ್ವೆರಾ ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.15ರಂದು ನಡ ಗ್ರಾಮದ ಬಲಿಪ ಸನ್‌ರಾಕ್ ರೆಸಾರ್ಟ್ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ಪೂರ್ವ ಅಧ್ಯಕ್ಷ ಪಿಪಿಫ್. ಡಾ. ಕೆದಿಗೆ ಅರವಿಂದ್ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ಜೇಸಿ, ಕುಟುಂಬೋತ್ಸವದ ಮೂಲಕ ನಮ್ಮ ಕೌಟುಂಬಿಕ ನೆಲೆಗಟ್ಟುಗಳನ್ನು, ಸಂಸ್ಕೃತಿಯನ್ನು ನಮಗೆ ಕಲಿಸುತ್ತದೆ. ಈ ಪರಂಪರೆಯನ್ನು ಹಿರಿಯ ಚೇಂಬರ್ ಮುಂದುವರಿಸುತ್ತದೆ, ಕಳೆದ ಅವಧಿಯಲ್ಲಿ ಅಧ್ಯಕ್ಷ ರಂಜನ್ ರಾವ್ ನೇತೃತ್ವದಲ್ಲಿ ಬೆಳ್ತಂಗಡಿ ಸೀನಿಯರ್ ಚೇಂಬರ್ ಉತ್ತಮ ಚಟುವಟಿಕೆಗಳನ್ನು ಮಾಡಿದೆ. ಸ್ವಚ್ಛ ಗಂಗಾ ಯೋಜನೆ, ಶುದ್ಧ ಕುಡಿಯುವ ನೀರು ಒದಗಿಸುವುದು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ನೂತನ ಅಧ್ಯಕ್ಷರು ಮುಂದುರಿಸಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ವಾಲ್ಟರ್ ಡಿ’ಸೋಜಾ ಅವರಿಗೆ ಅಂತರಾಷ್ಟ್ರೀಯ ಸೀನಿಯರ್ ಚೇಂಬರಿನ ಉಪಾಧ್ಯಕ್ಷರಾದ ಪಿಪಿಎಫ್ ಕಿಶೋರ್ ಫರ್ನಾಂಡಿಸ್ ಪದಗ್ರಹಣ ನೇರವೇರಿಸಿ, ಶುಭ ಹಾರೈಸಿದರು. ಕಳೆದ ಸಾಲಿನ ಅಧ್ಯಕ್ಷ ಪೃಥ್ವಿರಂಜನ್ ರಾವ್ ನೂತನ ಅಧ್ಯಕ್ಷರಾದ ವಾಲ್ಟರ್ ಸಿಕ್ವೆರಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಂತರ ನೂತನ ಅಧ್ಯಕ್ಷ ವಾಲ್ಟರ್ ಡಿ’ಸೋಜಾ ಇತರ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
ನೂತನ ಕಾರ್ಯದರ್ಶಿ ಜೋನ್ ಅರ್ವಿನ್ ಡಿಸೋಜ, ನೂತನ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸೀನಿಯರ್ ಚೇಂಬರ್‌ನ ಜವಾಬ್ದಾರಿಯುಕ್ತ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಲ್ಪಟ್ಟ ಗಂಡಿಬಾಗಿಲು ಸಿಯೋನ್ ಆಶ್ರಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯೂ. ಸಿ. ಪೌಲೋಸ್. ರವರನ್ನು ಸೀನಿಯರ್ ಚೇಂಬರ್ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ರಾಷ್ಟ್ರೀಯ ಪ್ರಭಾವಿ ಮಹಿಳೆ ವಿಜಯ ಸ್ಫೂರ್ತಿ ಪುರಸ್ಕಾರ ಪಡೆದ ಸಬಿತಾ ಮೋನಿಸ್ ಗರ್ಡಾಡಿ ಅವರನ್ನೂ ಸನ್ಮಾನಿಸಲಾಯಿತು.

ಮತದಾನ ಜಾಗೃತಿ ಬಗ್ಗೆ ಕರಪತ್ರನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತೇಶ್ ಬಿಡುಗಡೆಗೊಳಿಸಿದರು. ಜೊತೆಗೆ
ವಾಲ್ಟರ್ ಸಿಕ್ವೆರಾ ಹಾಗೂ ಪೆಲ್ಸಿಟಾ ಇವರ 40ನೇ ವರ್ಷದ ವೈವಾಹಿಕ ದಿನ ಹಾಗೂ ವಾಲ್ಟರ್ ಸಿಕ್ವೆರಾ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.

ಪೃಥ್ವಿರಂಜನ್ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಜೋನ್ ಅರ್ವಿನ್ ಡಿಸೋಜಾ ವಂದಿಸಿದರು. ತುಕಾರಾಮ್ ಕಾರ್ಯಕ್ರಮ ನಿರೂಪಿಸಿ.

error: Content is protected !!