ಮನೆ ಮಾಲಕಿ ಮೇಲೆ ಸಾಕು ನಾಯಿ‌ ದಾಳಿ: ಮುದ್ದಾಡುತ್ತಿದ್ದಾಗಲೆ ಮೈ ಮೇಲೆ ಎಗರಿ ತಲೆಭಾಗ ಸೀಳಿ ಹಾಕಿದ ಶ್ವಾನ!

ಬೆಳ್ತಂಗಡಿ : ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ ಮಾಡಿ ಮಹಿಳೆಯ ತಲೆ ಭಾಗ ಸೀಳಿ ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನಿಡಿಗಲ್ ನಲ್ಲಿ ಏ.18 ರಂದು ಸಂಭವಿಸಿದೆ.

ಓಂಕಾರ್ ನಿವಾಸಿ ದಿ. ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯನ್ನು ಎಂದಿನಂತೆ ಮುದ್ದಾಡುತ್ತಿದ್ದ ವೇಳೆ ಮಹಿಳೆ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು ಈ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದೆ. ಅಲ್ಲದೆ ಮಹಿಳೆಯ ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ.

ತಕ್ಷಣ ಮನೆಯವರು ಮಹಿಳೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!