ಉಡುಪಿ, ದ.ಕ. ಜಿಲ್ಲೆ ಶಾಲಾ ಕಾಲೇಜುಗಳಿಗೆ ದಿಢೀರ್ ರಜೆ ಘೋಷಣೆ: ರಂಜಾನ್ ಹಬ್ಬದ ನಿಮಿತ್ತ ಆದೇಶ, ಅರಿಯದೆ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು

ದ.ಕ: ರಂಜಾನ್ ಹಬ್ಬದ ನಿಮಿತ್ತ ಉಡುಪಿ‌ ಹಾಗೂ ದಕ್ಷಿಣ ಕನ್ನಡ ‌ಜಿಲ್ಲೆಯಾದ್ಯಂತ ಏ.10 ರಂದು ದಿಢೀರ್ ರಜೆ ಘೋಷಿಸಲಾಗಿದ್ದು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.‌

ಕ್ಯಾಲೆಂಡರ್ ‌ಪ್ರಕಾರ ಏ.11 ರಂದು ರಂಜಾನ್ ಹಬ್ಬಕ್ಕೆ ಸರಕಾರಿ ರಜೆ ಘೋಷಿಸಲಾಗಿತ್ತು. ಆದರೆ ಏ.09 ರಂದು ಚಂದ್ರ ದರ್ಶನ ಆಗಿರುವುದರಿಂದ 11 ರ ಬದಲಾಗಿ 10 ರಂದು ರಜೆ ಘೋಷಿಸುವಂತೆ ಮನವಿ‌ ಮಾಡಲಾಗಿತ್ತು. ಆ ಪ್ರಯುಕ್ತ ಉಡುಪಿ‌ ಹಾಗು ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಏ.10 ರಂದು ದಿಢೀರ್ ರಜೆ ಘೋಷಿಸಲಾಗಿದ್ದು ವಿದ್ಯಾರ್ಥಿಗಳು ‌ಗೊಂದಲಕ್ಕೀಡಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ಶಾಲೆಗೆ ಬಂದು ವಾಪಾಸ್ ಹೋಗುವಂತಾಗಿದೆ.

ಎ. 11 ರಂದು ಘೋಷಿಸಲಾಗಿದ್ದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಲಾಗಿದೆ.

error: Content is protected !!