ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2 ನೇ ದಿನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ: ಇಂದು ಸಂಜೆ 06 ಗಂಟೆಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ:ಓಡಿಲ್ನಾಳ ಮತ್ತು ಮದ್ದಡ್ಕ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ‌ಸಿಂಚನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಹಾಗೂ ಜಾತ್ರೋತ್ಸವಕ್ಕೆ ಏ.8 ರಂದು ಅದ್ದೂರಿ‌ ಚಾಲನೆ ಸಿಕ್ಕಿದೆ. ಇಂದು 2 ನೇ ದಿನದ ಕಾರ್ಯಕ್ರಮ ಆರಂಭಗೊಂಡಿದೆ.

ಶ್ರೀ‌ ಕ್ಷೇತ್ರದಲ್ಲಿ ಇಂದು ಬೆಳಗ್ಗೆಯಿಂದ ಗಣಯಾಗ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ ನಡೆಯುತ್ತಿದ್ದು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.‌

ಸಂಜೆ 5 ರಿಂದ ಸಪ್ತಶುದ್ಧಿ , ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ ನೆರವೇರಲಿದೆ.

ಸಂಜೆ 6 ಗಂಟೆಯಿಂದ ಓಡಿಲ್ನಾಳ ಮತ್ತು ಮದ್ದಡ್ಕ ಅಂಗನವಾಡಿ ಮಕ್ಕಳಿಂದ ಹಾಗೂ ಸರಕಾರಿ ಪ್ರಾಥಮಿಕ ಉನ್ನತೀಕರಿಸಿದ ಶಾಲೆ , ಓಡಿಲ್ನಾಳ ಇಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಮೂಡಿಬರಲಿದೆ.

ರಾತ್ರಿ 07:30 ರಿಂದ ಶಶಿಧರ ಶೆಟ್ಟಿ ನವಶಕ್ತಿ ಬರೋಡ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ರಾಮ ಕ್ಷೇತ್ರ ಕನ್ಯಾಡಿ ಧರ್ಮಸ್ಥಳ ಇಲ್ಲಿನ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ
ಸರಸ್ವತಿ ಸ್ವಾಮೀಜಿ ಆಶೀರ್ವಚನ‌ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಂದರ ಹೆಗ್ಡೆ ಅಧ್ಯಕ್ಷರು ಪ್ರಾಥಮಿಕ ಕೃಷಿಪತ್ತಿನ ಸೇವಾ ಸಹಕಾರಿ ಸಂಘ ವೇಣೂರು, ಶಂಕರ್ ನಾರಾಯಣ ಭಟ್ ಮಿತ್ತೊಟ್ಟು, ವೈ ನಾಣ್ಯಪ್ಪ ಪೂಜಾರಿ ಗುರುವಾಯನಕೆರೆ ಸೇರಿದಂತೆ ಅನೇಕ‌ರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾತ್ರಿ 08 ಗಂಟೆಯಿಂದ ಜ್ಯೋತಿ ಯುವತಿ ಮಂಡಳಿ ಮುಂಡೂರು ಇವರಿಂದ ಸದಾನಂದ ಬಿ. ಮುಂಡಾಜೆ ಇವರ ರಚನೆ ಪರಿಕಲ್ಪನೆಯಲ್ಲಿ, ಹೇಮಾವತಿ ಕೆ. ಬೆಳ್ತಂಗಡಿ ಇವರ ನಿರ್ದೇಶನದಲ್ಲಿ ಪುಣ್ಯಕೋಟಿ ನೃತ್ಯರೂಪಕ ಮೂಡಿಬರಲಿದೆ.

error: Content is protected !!