ಓಡೀಲು ಕ್ಷೇತ್ರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಅರ್ಥಪೂರ್ಣ ಚಾಲನೆ ಶ್ರೀ ಕ್ಷೇತ್ರದ ಮಹಾದ್ವಾರ ಲೋಕಾರ್ಪಣೆ, ಸಹಸ್ರಾರು ಭಕ್ತ ಗಡಣದ ಜೊತೆಗೆ ವೈಭವದ ಹಸಿರು ವಾಣಿ ಹೊರೆಕಾಣಿಕೆ

 

 

 

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ಏ.08 ರಂದು ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಓಡೀಲ್ನಾಳ, ಪಡಂಗಡಿ, ಸೋಣಂದೂರು, ಕುವೆಟ್ಟು ಗ್ರಾಮಗಳಿಂದ ಮೆರವಣಿಗೆಯಲ್ಲಿ ಬಂದ ಹಸಿರು ಹೊರೆಕಾಣಿಕೆ ಕಿನ್ನಗೋಳಿಯ ಮಹಾದ್ವಾರಕ್ಕೆ ತಲುಪಿತು.
ಅಲ್ಲಿ ಶಿವಲಿಂಗದ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿ, ಗೋ ಪೂಜೆ ನಡೆಯಿತು. ಬಳಿಕ ಉದ್ಯಮಿ‌ ಹಾಗೂ ಓಡೀಲು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶಶಿಧರ ಶೆಟ್ಟಿ ಹಾಗೂ ಕುಟುಂಬಸ್ಥರು ಕೊಡುಗೆಯಾಗಿ ನೀಡಿದ ಮಹಾದ್ವಾರದ ಉದ್ಘಾಟನೆಯನ್ನು ಕಾಶಿಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ನೆರವೇರಿಸಿದರು.

 

 

ಈ ಕ್ಷಣದಲ್ಲಿ ಭಕ್ತಾಧಿಗಳ ಮೇಲೆ ಹೂವಿನ ಮಳೆಗೆರೆಯಲಾಯಿತು.

 

 

ಅಲ್ಲಿಂದ ಕ್ಷೇತ್ರಕ್ಕೆ ಸಾಲಾಗಿ ಬಂದ ಹೊರೆಕಾಣಿಕೆ ಮೆರವಣಿಗೆ ಉಗ್ರಾಣ ತಲುಪಿ ರೈತಬಂಧು ಕಣಿಯೂರು ಇದರ ಮಾಲಕರಾದ ಶಿವಶಂಕರ್ ನಾಯಕ್ ಉಗ್ರಾಣವನ್ನು ದೀಪ ಬೆಳಗಿ ಉದ್ಘಾಟಿಸಿದರು .

 

 

ಮೆರವಣಿಗೆಯಲ್ಲಿ ನೂರಾರು ಭಜಕರು ಕುಣಿತ ಭಜನೆಯ ಮೂಲಕ ಮೆರವಣಿಗೆಯಲ್ಲಿ ಸಾಗಿ, ವಿವಿಧ ವೇಷ ಭೂಷಣಗಳು ಗಮನ‌ ಸೆಳೆದವು. ಬ್ಯಾಟರಿ ಚಾಲಿತ ವಾಹನ‌ ಕೂಡ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು.

error: Content is protected !!