ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ: ಒಂದೇ ಕುಟುಂಬದ 7 ಜನ ದಾರುಣ ಸಾವು: ಎರಡು ಮತ್ತು ಮೂರು ವರ್ಷದ 2 ಕಂದಮ್ಮಗಳು ಬೆಂಕಿಗೆ ಆಹುತಿ

ಮಹಾರಾಷ್ಟ್ರ : ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿರುವ ಭೀಕರ ಘಟನೆ ಛತ್ರಪತಿ ಸಂಬಾಜಿನಗರದ ಕ್ಯಾಂಪ್ ಪ್ರದೇಶದ ಜೈನ ಮಂದಿರದ ಬಳಿ ನಡೆದಿದೆ.

ಕಂಟೋನ್ಮೆಂಟ್ ಪ್ರದೇಶದಲ್ಲಿನ ಗಾಮೆರ್ಂಟ್ಸ್ ಅಂಗಡಿಯಲ್ಲಿ ಬೆಳಗಿನ ಜಾವ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎರಡು ಮತ್ತು ಮೂರು ವರ್ಷದ ಮಗು ಕೂಡ ಬೆಂಕಿಗೆ ಆಹುತಿಯಾಗಿವೆ. ಎಲ್ಲ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು . ಮೊದಲಿಗೆ ಆರು ಇದ್ದ ಸಾವಿನ ಸಂಖ್ಯೆ ಈಗ7ಕ್ಕೆ ಏರಿಕೆಯಾಗಿದೆ.

ಘಟನೆಗೆ ಇನ್ನೂ ಸೂಕ್ತ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!