ಪುದುವೆಟ್ಟು ,ಪೈಪ್ ಲೈನ್ ಡೀಸೆಲ್ ಕಳ್ಳತನ ಪ್ರಕರಣ: ಐದು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

 

 

 

ಬೆಳ್ತಂಗಡಿ:  ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ವಿನ ಇಬ್ಬರು   ಕಡಬ ಹಾಗೂ ಹಾಸನ ಜಿಲ್ಲೆಯ  ಆರೋಪಿಗಳನ್ನು ಎ.1 ರಂದು ನೆಲ್ಯಾಡಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ಕೋರ್ಟ್ ಗೆ  ಸಂಜೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ 4 ದಿನಗಳ ಪೊಲೀಸ್ ಕಸ್ಟಡಿ ನೀಡಿದ್ದರು.ಪೊಲೀಸ್ ಕಸ್ಟಡಿ ಅಂತ್ಯವಾಗಿರುವುದರಿಂದ ಎ.4 ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದ್ದು ಅರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ನಡುವೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಯಾರೋ ಕಳ್ಳರು ಡಿಸೇಲ್ ಪೈಪ್ ಲೈನ್ ನಲ್ಲಿ ರಂದ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀ. ಡಿಸೇಲ್ ನ್ನು ಕಳವು ಮಾಡಿದ್ದಾರೆ. ಕಳವಾದ ಡಿಸೇಲ್ ನ ಮೌಲ್ಯ ರೂ 9,60,000 ಎಂದು ಪರಿಗಣಿಸಲಾಗಿದೆ.
ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 19/2024 ಕಲಂ: 427,285, 379 ಐ ಪಿ ಸಿ ಕಲಂ 15(2) ಪೆಟ್ರೊನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿತ್ತು.

ಕೃತ್ಯಕ್ಕೆ ಬಳಸಿದ 800 ಕಾರು ,100 ಲೀಟರ್ ಡೀಸೆಲ್ , ಪೈಪುಗಳು , ಡ್ರಿಲಿಂಗ್ ಮೆಷಿನ್ ,ವೆಲ್ಡಿಂಗ್ ಮೆಷಿನ್, ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

error: Content is protected !!