ಕಡಬ ಅಕ್ರಮ ಗೋ ಸಾಗಾಟದ ವಾಹನ ಡಿಕ್ಕಿ ವ್ಯಕ್ತಿ ಸಾವು: ಗೋ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ,ಎಸ್ ಪಿ. ಭೇಟಿ: ಅಪಘಾತವಲ್ಲ ಕೊಲೆ, ಕ್ರಮ ಕೈಗೊಳ್ಳದಿದ್ದರೆ ರಸ್ತೆಗೆ ಇಳಿಯಬೇಕಾದೀತು: ಹರೀಶ್ ಪೂಂಜ ಎಚ್ಚರಿಕೆ:

 

 

ಬೆಳ್ತಂಗಡಿ: ಕಡಬದಲ್ಲಿ ಆಕ್ರಮವಾಗಿ ಗೋ ಸಾಗಾಟ ಮಾಡುತಿದ್ದ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ರಾತ್ರಿ ಪ್ರತಿಭಟನೆ ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಭಟನೆಯಲ್ಲಿ ಭಾಗವಹಿಸಿದರು.ಈ ವೇಳೆ ಮಾತನಾಡಿದ ಅವರು
ಇದು ಅಪಘಾತವಲ್ಲ ಉದ್ಧೇಶಪೂರ್ವಕ ಕೊಲೆ. ಅದ್ದರಿಂದ ತಕ್ಷಣ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ,ಒಂದು ವೇಳೆ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಹಾಗೂ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅವ್ಯಾಹತವಾದ ಗೋ ಹತ್ಯೆ ಗೋ ಅಕ್ರಮ ಸಾಗಾಟಗಳನ್ನು ನಿಲ್ಲಿಸಿದಿದ್ದರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ರಸ್ತೆಗಿಳಿದು ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು. ಸ್ಥಳಕ್ಕೆ ದ.ಕ. ಜಿಲ್ಲಾ ಎಸ್.ಪಿ. ಭೇಟಿ ನೀಡಿದರು.

 

ಇದನ್ನೂ ಓದಿ:

ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ: ಬೆನ್ನಟ್ಟಿ ಹಿಡಿದ ವೇಣೂರು ಪೊಲೀಸರು: ರಸ್ತೆಯಲ್ಲೇ ವಾಹನ ಬಿಟ್ಟು ಪರಾರಿಯಾದ ಗೋ ಕಳ್ಳರು:

 

error: Content is protected !!