ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ: ಬೆನ್ನಟ್ಟಿ ಹಿಡಿದ ವೇಣೂರು ಪೊಲೀಸರು: ರಸ್ತೆಯಲ್ಲೇ ವಾಹನ ಬಿಟ್ಟು ಪರಾರಿಯಾದ ಗೋ ಕಳ್ಳರು:

 

 

ಬೆಳ್ತಂಗಡಿ; ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತಿದ್ದ ವಾಹನವನ್ನು ವೇಣೂರು ಪೊಲೀಸರು ಬಜಿರೆಯಲ್ಲಿ ಪತ್ತೆಹಚ್ಚಿ ನಾಲ್ಕು ಗೋವುಗಳನ್ನು ರಕ್ಷಿಸಿದ್ದಾರೆ.
ಶನಿವಾರ ಸಂಜೆಯ ವೇಳೆ ವೇಣೂರು ಪೊಲೀಸರು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಮಾರ್ಗವಾಗಿ ಬಂದ ಕೆ.ಎ 21ಬಿ 1902 ನಂಬರಿನ‌ ಅಶೋಕ್ ಲೈಲಾಂಡ್ ದೋಸ್ತ್ ಗೂಡ್ಸ್ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕನು ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಮುಂದೆ ಹೋಗಿದ್ದು ತಕ್ಷಣ ಪೋಲೀಸರು ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ಮುಂದೆ ಚಾಲಕ ಹಾಗೂ ಸಹಚರ ವಾಹನವನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ನಾಲ್ಕು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದು ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಂಡು ಪ್ರಕರಣ‌ ದಾಖಲಿಸಿದ್ದಾರೆ. ತಪ್ಪಿಸಿಕೊಂಡ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ‌.ಈಗಾಗಲೇ ಪ್ರಜಾಪ್ರಕಾಶ ನ್ಯೂಸ್ ಅಕ್ರಮ ಗೋ ಸಾಗಾಟದ   ಬಗ್ಗೆ ಎಚ್ಚರಿಕೆಯ ವರದಿಯನ್ನು ಪ್ರಕಟಿಸಿತ್ತು.

 

ಇದನ್ನೂ ಓದಿ:

 

ರಾತ್ರಿ ಹಗಲು ಗೋವು ಅಪಹರಣ ನಿರಂತರ!, ಮೂಕ ಪ್ರಾಣಿಗಳಿಗಿಲ್ಲ ರಕ್ಷಣೆ: ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲವೇ ಚೆಕ್ ಪೋಸ್ಟ್…?: ಕಳ್ಳರಿಗಿಲ್ಲ ಪೊಲೀಸರ ಭಯ, ಕರಾವಳಿಯಲ್ಲಿ ಅಕ್ರಮ ಸಾಗಾಟ ಅವ್ಯಾಹತ: ಎಗ್ಗಿಲ್ಲದೆ ಸಾಗಿದೆ ದನ ಕಳ್ಳತನ, ದುರುಳರಿಗಿದೆಯೇ ಪ್ರಭಾವಿಗಳ ಅಭಯಹಸ್ತ…!!??

 

 

 

error: Content is protected !!