ಮುಂಡಾಜೆ ಮೂಕ ಪ್ರಾಣಿಗಳಿಗೆ ವಿಷವಿಕ್ಕಿದ ಪಾಪಿಗಳು: 10ಕ್ಕೂ ಅಧಿಕ ಸಾಕು ನಾಯಿ ಸೇರಿದಂತೆ ಬೀದಿ ನಾಯಿಗಳು ಸಾವು:

 

 

 

 

ಬೆಳ್ತಂಗಡಿ:ಮೂಕ ಪ್ರಾಣಿಗಳಿಗೆ ವಿಷಕ್ಕಿದ ಪರಿಣಾಮ 10ಕ್ಕೂ ಅಧಿಕ ನಾಯಿಗಳ ಸಾವಿಗೀಡಾದ ಘಟನೆ ನಡೆದಿದೆ. ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಯಾರೋ ದುರುಳರು
ಶನಿವಾರ ರಾತ್ರಿ ಈ ರಸ್ತೆಯುದ್ದಕ್ಕೂ ಯಾವುದು ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ.ಇದನ್ನು ತಿಂದಿರುವ ನಾಯಿಗಳು ಸತ್ತು ಬಿದ್ದಿವೆ.
ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದರು. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.
ಸಾವನ್ನಪ್ಪಿದ ನಾಯಿ ಗಳನ್ನು ಪಂಚಾಯಿತಿ ವತಿಯಿಂದ ದಫನ ಮಾಡಲಾಗಿದೆ.ಈ ರೀತಿಯ ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!