ಕುಂಡದಬೆಟ್ಟು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಧರೆಗೆ ಉರುಳಿದ ವಿದ್ಯುತ್ ಕಂಬ: ಸ್ಥಳೀಯರಿಂದ ತಪ್ಪಿತು ಭಾರೀ ಅನಾಹುತ: ಉಳಿಯಿತು ಪ್ರಾಣ!

ಗರ್ಡಾಡಿ: ಚಾಲಕನ ನಿಯಂತ್ರಣದ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕೊಂಡದಬೆಟ್ಟು ಸಮೀಪದ ರನ್ನಾಡಿಪಲ್ಕೆ ಎಂಬಲ್ಲಿ ಮಾ. 29 ರಂದು ಸಂಭವಿಸಿದೆ.

ವೇಣೂರಿನಿಂದ ಗುರುವಾಯನಕೆರೆಗೆ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಧರೆಗೆ ಉರುಳಿದೆ. ಲೈನ್ ಚಾರ್ಜ್ ಇದ್ದ ಕಾರಣ ತಕ್ಷಣವೇ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನಾಹುತ ತಪ್ಪಿಸಿದ್ದಾರೆ.

ದೇವಸ್ಥಾನದಿಂದ ಮರಳಿ ಬರುವಾಗ ಈ ಘಟನೆ ನಡೆದಿದ್ದು ಸದ್ಯ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮಡಂತ್ಯಾರು ಮೂಲದ್ದು ಎಂದು ತಿಳಿದು ಬಂದಿದೆ.

error: Content is protected !!