ನರೇಗಾ ಕಾರ್ಮಿಕರ ದಿನಗೂಲಿ ದರ ಹೆಚ್ಚಳ: ಶೇ.3ರಿಂದ 10ರಷ್ಟು ಹೆಚ್ಚಿಸಿ ಆದೇಶಿಸಿದ ಕೇಂದ್ರ ಸರ್ಕಾರ: ಏ.1ರಿಂದ ಜಾರಿ

ನವದೆಹಲಿ: 2024-25ನೇ ಆರ್ಥಿಕ ವರ್ಷದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ದಿನಗೂಲಿ ದರವನ್ನು ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ದಿನವೊಂದಕ್ಕೆ 349 ರೂಪಾಯಿಗೆ ಹೆಚ್ಚಿಸಿದೆ.

2024-25ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ನರೇಗಾದ ಸರಾಸರಿ ಕೂಲಿ 289 ರೂ ಆಗಲಿದೆ. 2023-24ರ ಆರ್ಥಿಕ ವರ್ಷದಲ್ಲಿ ಈ ದರ 261 ರೂ ಆಗಿದ್ದು, ಇದೀಗ 28 ರೂ ಏರಿಕೆ ಮಾಡಲಾಗಿದ್ದು ಏ.1ರಿಂದ ಈ ಆದೇಶದ ಅನ್ವಯ 349 ರೂಪಾಯಿಗೆ ಏರಿಕೆಯಾಗಲಿದೆ.

2024-25ರಲ್ಲಿನ ಕೇಂದ್ರ ಬಜೆಟ್‌ನಲ್ಲಿ ನರೇಗಾಗಾಗಿ ಕೇಂದ್ರ ಸರ್ಕಾರ 86 ಸಾವಿರ ಕೋಟಿ ರೂ ಮೀಸಲಿಟ್ಟಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈ ದರ ಶೇ.10ರಷ್ಟು ಏರಿಕೆಯಾಗಿದೆ.

error: Content is protected !!